ಮಹಾರಾಷ್ಟ್ರದ ಪೂನಾದಲ್ಲಿ ದಿ.ಡೊಂಬಯ್ಯ ಭಂಡಾರಿಯವರ ಪತ್ನಿ ಸೀತಾ ಡೊಂಬಯ್ಯ ಭಂಡಾರಿಯವರು ಫೆಬ್ರವರಿ 14 ರ ಬೆಳಗಿನ ಜಾವ 12:30 ಕ್ಕೆ ವಯೋಸಹಜ ಅನಾರೋಗ್ಯದಿಂದ ದೈವಾಧೀನರಾಗಿದ್ದಾರೆ.ಅವರಿಗೆ ಸುಮಾರು 72 ವರ್ಷ ವಯಸ್ಸಾಗಿತ್ತು..
ಅವರು ಮಗ ಶ್ರೀ ವಿಜಯ್ ಕುಂದರ್,ಮಗಳು ಶ್ರೀಮತಿ ಲತಾ ಅಚ್ಯುತ್ ಭಂಡಾರಿ(ಸಚ್ಚರಿಪೇಟೆ) ಹಾಗೂ ಅಪಾರ ಬಂಧುವರ್ಗದವರನ್ನು ಅಗಲಿದ್ದಾರೆ.
ಅಗಲಿದ ಹಿರಿಯ ಜೀವ ಸೀತಾ ಡೊಂಬಯ್ಯ ಭಂಡಾರಿಯವರ ಅಗಲಿಕೆಯಿಂದ ದುಃಖದ ಮಡುವಿನಲ್ಲಿರುವ ಕುಟುಂಬಸ್ಥರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಮತ್ತು ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.
— ಭಂಡಾರಿವಾರ್ತೆ.