January 18, 2025
IMG-20180602-WA0060

ಕಡಬ, ಜೂ.02. ಹಿರಿಯ ಆರೆಸ್ಸೆಸ್ ಕಾರ್ಯಕರ್ತ ಮತ್ತು ಮೇಕಪ್ ಕಲಾವಿದರಾದ ವಿದ್ಯಾನಗರ ನಿವಾಸಿ ನಾರಾಯಣ ಭಂಡಾರಿ (70) ಅಲ್ಪಕಾಲದ ಅಸೌಖ್ಯದಿಂದ ಶನಿವಾರದಂದು ಸ್ವಗೃಹದಲ್ಲಿ ನಿಧನರಾದರು.

ಕಳೆದ ಕೆಲ‌ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರದಂದು ಮನೆಗೆ ಕರೆದುಕೊಂಡು ಬರಲಾಗಿತ್ತು. ಮೃತರು ಪತ್ನಿ ಮತ್ತು ಮಕ್ಕಳಾದ ಭಾರತಿ ಭಂಡಾರಿ , ಕಡಬ ಉದಯವಾಣಿ ವರದಿಗಾರ ನಾಗರಾಜ್ ಎನ್. ಕೆ, ಕಡಬ ಬಿಜೆಪಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್.ಕೆ., ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಪ್ರಸಾದ್ ಕೆ.ಎನ್. ಮುಂತಾದವರನ್ನು ಅಗಲಿದ್ದಾರೆ. 

ಅಗಲಿದ ಹಿರಿಯ ಚೇತನಕ್ಕೆ ಚಿರಶಾಂತಿ ಲಭಿಸಲಿ ಮತ್ತು ದುಃಖತಪ್ತ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶ್ರೀ ದೇವರಲ್ಲಿ ಪ್ರಾರ್ಥಿಸುತ್ತದೆ.

ಭಂಡಾರಿವಾರ್ತೆ

 

Leave a Reply

Your email address will not be published. Required fields are marked *