
ಬಾರ್ಕೂರಿನ ಕಚ್ಚೂರು ಶ್ರೀ ನಾಗೇಶ್ವರನ ಸನ್ನಿಧಾನದಲ್ಲಿ ಮೇ ತಿಂಗಳ 4 ರಿಂದ 9 ರ ವರೆಗೆ ಜರಗುತ್ತಿರುವ ಅಷ್ಟಬಂಧ ಪೂರ್ವಕ ಬ್ರಹ್ಮಕಲಶೋತ್ಸವ ಮತ್ತು ಮೇ 8 ರಂದು ಹಮ್ಮಿಕೊಂಡಿರುವ ಷೋಡಶ ಪವಿತ್ರಾತ್ಮಕ ಸಂಪೂರ್ಣ ನಾಗಮಂಡಲ ವೈಭವೋತ್ಸವಕ್ಕೆ ಪೂರಕವಾಗಿ ಭಂಡಾರಿ ಸಮಾಜ ಸಂಘ,ಶಿರಾಳಕೊಪ್ಪ-ಸೊರಬ ವಲಯದ ಸರ್ವ ಸಧಸ್ಯರು ಸಮಾಜದ ಬಂಧುಗಳಿಂದ ಮತ್ತು ಸಾರ್ವಜನಿಕರಿಂದ ಕಾಣಿಕೆ ಮತ್ತು ಹಸಿರು ಹೊರೆಕಾಣಿಕೆ ಸಂಗ್ರಹಿಸಿದರು.
ಸಾರ್ವಜನಿಕರು ಮತ್ತು ಸಮಾಜದ ಬಂಧುಗಳ ಅಭೂತಪೂರ್ವ ಸ್ಪಂದನೆಯಿಂದಾಗಿ ನಮ್ಮ ನಿರೀಕ್ಷೆಗೂ ಮೀರಿ ಹೊರೆ ಕಾಣಿಕೆ ಸಂಗ್ರಹಿಸಲಾಯಿತು.

ಒಂದು ಸಾವಿರ ಕೆ.ಜಿ.ಅಕ್ಕಿ,ಮೂರೂವರೆ ಕ್ವಿಂಟಾಲ್ ಉಪ್ಪಿನಕಾಯಿ,ಎರಡೂವರೆ ಕ್ವಿಂಟಾಲ್ ತರಕಾರಿ, ಐವತ್ತು ಲೀಟರ್ ಸನ್ ಫ್ಲವರ್ ಅಡಿಗೆ ಎಣ್ಣೆ,ಐವತ್ತು ಕೆ.ಜಿ.ಬೆಲ್ಲ,ಐವತ್ತು ಕೆ.ಜಿ.ತೊಗರೀಬೇಳೆ,ಬಾಳೇ ಹಣ್ಣು,ಬಾಳೇ ಎಲೆ,ಅಡಿಕೆ ಹಿಂಗಾರ….ಇವೆಲ್ಲವನ್ನೂ ಅಲಂಕೃತಗೊಂಡ ವಾಹನದಲ್ಲಿ ಮೇ 5 ರ ಶನಿವಾರ ಶಿರಾಳಕೊಪ್ಪ ಮತ್ತು ಸೊರಬದಲ್ಲಿ ಪೂಜೆಯನ್ನು ಮಾಡುವುದರೊಂದಿಗೆ ಶ್ರೀ ಕ್ಷೇತ್ರಕ್ಕೆ ಕಳುಹಿಸಿಕೊಡಲಾಯಿತು.
ಈ ಸಂದರ್ಭದಲ್ಲಿ ಭಂಡಾರಿ ಸಮಾಜ ಸಂಘ ಶಿರಾಳಕೊಪ್ಪ,-ಸೊರಬ ಘಟಕದ ಅಧ್ಯಕ್ಷರಾದ ಶ್ರೀ ಗಣೇಶ್ ಭಂಡಾರಿ,ಕಾರ್ಯದರ್ಶಿ ಶ್ರೀ ಉಮೇಶ್ ಭಂಡಾರಿ, ಖಜಾಂಚಿ ಶ್ರೀ ಪ್ರಸನ್ನ ಭಂಡಾರಿ,ಸವಿತಾ ಸಮಾಜದ ಗೌರವಾಧ್ಯಕ್ಷರಾದ ಶ್ರೀ ಜೋಗು ಭಂಡಾರಿ, ಶ್ರೀಮತಿ ವಸಂತಮ್ಮ ಜೋಗು ಭಂಡಾರಿ, ಶ್ರೀ ರಂಜನ್ ಭಂಡಾರಿ, ಶ್ರೀ ರತ್ನಾಕರ ಭಂಡಾರಿ, ಶ್ರೀ ನಾಗರಾಜ ಭಂಡಾರಿ, ಶ್ರೀ ಬಾಬು ಭಂಡಾರಿ, ಶ್ರೀ ರಮೇಶ್ ಭಂಡಾರಿ, ಶ್ರೀ ರಘು ಭಂಡಾರಿ ಮತ್ತು ಭಂಡಾರಿ ಸಮಾಜ ಸಂಘದ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.
ನಮ್ಮ ಸರ್ವಾಲಂಕೃತಗೊಂಡ ಹಸಿರು ಹೊರೆ ಕಾಣಿಕೆಯನ್ನು ಹೊತ್ತ ವಾಹನವನ್ನು ಮೆರವಣಿಗೆಯ ಮುಂಭಾಗದಲ್ಲಿ ಚಲಿಸಲು ಅವಕಾಶ ಮಾಡಿಕೊಟ್ಟದ್ದು ನಮಗೆ ಅತೀವ ಸಂತಸವನ್ನುಂಟು ಮಾಡಿತು.ಹೆಚ್ಚಿನ ಹೊರೆ ಕಾಣಿಕೆ ಸಂಗ್ರಹಿಸಲು ಸಹಕರಿಸಿದ ಭಂಡಾರಿ ಸಮಾಜ ಸಂಘ ಶಿರಾಳಕೊಪ್ಪ-ಸೊರಬ ಘಟಕದ ಎಲ್ಲಾ ಸದಸ್ಯರಿಗೂ ಧನ್ಯವಾದಗಳು.ನಾವು ಸಮಾಜದ ಬಂಧುಗಳಿಂದ ಮತ್ತು ಸಾರ್ವಜನಿಕರಿಂದ ಕಾಣಿಕೆ ರೂಪದಲ್ಲಿ ಸಂಗ್ರಹಿಸಿದ ಸುಮಾರು ನಲವತ್ತು ಸಾವಿರ ರೂಪಾಯಿಗಳನ್ನು ಶ್ರೀ ದೇವರಿಗೆ ಅರ್ಪಿಸಿ ಸಕಲರಿಗೂ ಸನ್ಮಂಗಳವನ್ನುಂಟು ಮಾಡೆಂದು ಬೇಡಿಕೊಂಡೆವು ಎಂದು ಭಂಡಾರಿ ಸಮಾಜ ಸಂಘ ಶಿರಾಳಕೊಪ್ಪ-ಸೊರಬ ವಲಯಾಧ್ಯಕ್ಷರಾದ ಶ್ರೀ ಗಣೇಶ್ ಭಂಡಾರಿಯವರು “ಭಂಡಾರಿವಾರ್ತೆ” ಯೊಂದಿಗೆ ತಮ್ಮ ಸಂತಸ ಹಂಚಿಕೊಂಡರು.
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ