
ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಸುಧಾಕರ ಭಂಡಾರಿಯವರು ಅಕ್ಟೋಬರ್ 11 ರ ಗುರುವಾರ ತಮ್ಮ ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
ಶಿರಾಳಕೊಪ್ಪದ ದಿವಂಗತ ರಾಜು ಭಂಡಾರಿ ಮತ್ತು ಪಾರ್ವತಮ್ಮ ರಾಜು ಭಂಡಾರಿ ದಂಪತಿಯ ದ್ವಿತೀಯ ಪುತ್ರರಾದ ಇವರ ಧರ್ಮಪತ್ನಿ ಶ್ರೀಮತಿ ಗೀತಾ ಸುಧಾಕರ ಭಂಡಾರಿ. ವೈಷ್ಣವಿ ಮತ್ತು ಅದಿತಿ ಈ ದಂಪತಿಗಳ ಮುದ್ದಿನ ಮಕ್ಕಳು .
ಸುಧಾಕರ ಭಂಡಾರಿಯವರು MA in Education ಪದವಿ ಪೂರೈಸಿ ಶಿರಾಳಕೊಪ್ಪದಲ್ಲಿ MICE ಸಹಭಾಗಿತ್ವದಲ್ಲಿ “ಪುಷ್ಪಕ್ ಕಂಪ್ಯೂಟರ್ಸ್” ಹೆಸರಿನ ಸಂಸ್ಥೆಯೊಂದನ್ನು ನಡೆಸುತ್ತಿದ್ದು , ಪ್ರಸ್ತುತ ಬೆಂಗಳೂರಿನಲ್ಲಿ ಅಮೇರಿಕನ್ ಇಂಡಿಯಾ ಫೌಂಡೇಷನ್ ನಲ್ಲಿ “ರೀಜನಲ್ ಕೋಆರ್ಡಿನೇಟರ್” ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯ ಅನೇಕ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದು ಭಂಡಾರಿವಾರ್ತೆಗಾಗಿ ಹಲವು ಲೇಖನಗಳನ್ನು ಬರೆದಿದ್ದಾರೆ. ಇವರೊಬ್ಬ ಹವ್ಯಾಸಿ ಬರಹಗಾರರೂ ಹೌದು.

ಹುಟ್ಟು ಹಬ್ಬವನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಅವರಿಗೆ
ಅವರ ಪತ್ನಿ, ಪುತ್ರಿಯರು,
ಅತ್ತೆ, ಮಾವ,
ಸಹೋ ದರರು, ಸ್ನೇಹಿತರು, ಸಹೋದ್ಯೋಗಿಗಳು,
ಆತ್ಮೀಯರು, ಶುಭ ಹಾರೈಸುತ್ತಿದ್ದಾರೆ.

ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸುಧಾಕರ ಭಂಡಾರಿಯವರಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ.
ತುಂಬು ಹೃದಯದ ಅಭಿನಂದನೆಗಳು
ತುಂಬು ಹೃದಯದ ಧನ್ಯವಾದಗಳು