September 20, 2024
ಸಿದ್ದಾಪುರ ಕಡ್ರಿಮನೆ ದಿ.ಗಿರಿಯ ಭಂಡಾರಿ ಹಾಗೂ ದಿ.ಮಂಜಿ ಭಂಡಾರಿಯವರ ಪುತ್ರ ಶ್ರೀ ಶಿವರಾಮ ಭಂಡಾರಿ ಹಾಗೂ ಪೆರ್ಡೂರು ಶ್ರೀ ಮಹಾಬಲ ಭಂಡಾರಿ ಹಾಗೂ ಶ್ರೀಮತಿ ಪಾರ್ವತಿ ಮಹಾಬಲ ಭಂಡಾರಿ ಇವರ ಪುತ್ರಿ ಶ್ರೀಮತಿ ಸುಮನ ಶಿವರಾಮ ಭಂಡಾರಿಯವರು ಸಿದ್ದಾಪುರದ ತಮ್ಮ ಮನೆಯಲ್ಲಿ ಪುತ್ರಿ ಕು.ಸುಶ್ಮಿತ ಹಾಗೂ ಸಿದ್ದಾಪುರ(ಶಿರೂರು)  ಮತ್ತು ಪೆರ್ಡೂರು ಭಂಡಾರಿ ಕುಟುಂಬದ ಬಂಧುಗಳು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ತಮ್ಮ ಮದುವೆಯ ಇಪ್ಪತ್ತೈದನೆಯ ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮ ಸಡಗರದಿಂದ ಆಚರಿಸಿಕೊಂಡರು.


ವೈವಾಹಿಕ ಜೀವನದ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭಕೋರುತ್ತದೆ.

–ಭಂಡಾರಿವಾರ್ತೆ

Leave a Reply

Your email address will not be published. Required fields are marked *