January 18, 2025
Shivas1
ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಹಲವು ಪ್ರತಿಷ್ಠಿತ ಗಣ್ಯರ ಕೇಶ ವಿನ್ಯಾಸದ ಮೂಲಕ ಹೆಸರುವಾಸಿಯಾಗಿರುವ ಕಾರ್ಕಳ ಮೂಲದ ಹೇರ್ ಎಕ್ಸ್ ಪರ್ಟ್ ಡಾ| ಶಿವರಾಮ ಕೃಷ್ಣ ಭಂಡಾರಿ ಅವರ ಶಿವಾಸ್ ಹೇರ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ 23ನೇ ಶಾಖೆ ಸಲೂನ್ ಶಿವಾಸ್ ಸ್ಯಾಲ್ಯೂಟ್ ಮುಂಬಯಿನ ವಿಲೇ ಪಾರ್ಲೆ (ಈಸ್ಟ್ )ನ ಮಹಂತ್ ವಿಲೇ ರೋಡ್ ಮತ್ತು ಹನುಮಾನ್ ಕ್ರಾಸ್ ನಲ್ಲಿರುವ  ಝೀ ಉಷಾ ನಿಕೇತನ್ ಸಿ ಎಚ್ ಎಸ್ ಎಲ್ ಸಂಕೀರ್ಣದಲ್ಲಿ ಆಗಸ್ಟ್ 31 ರ ಮಂಗಳವಾರ ಶುಭಾರಂಭಗೊಂಡಿತು.  

ಶಿವಾಸ್ ಹೇರ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ಮುಂಬೈನಾದ್ಯಂತ  20 ಕ್ಕೂ ಅಧಿಕ ಶಾಖೆಗಳನ್ನು ಹೊಂದಿದ್ದು  ವಿಶಿಷ್ಟ ಶೈಲಿಯ ಸೇವೆಯ ಕೇಶ ವಿನ್ಯಾಸಗಳಿಗೆ ಹೆಸರುವಾಸಿಯಾಗಿದೆ ಹಾಗೂ ಈಗಾಗಲೇ ಗ್ಲಾಮರ್, ಫ್ಯಾಷನ್, ಶೋ ಬಿಸಿನೆಸ್ ಮತ್ತು ಕಾರ್ಪೊರೇಟ್ ವರ್ಲ್ಡ್ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿದೆ .

ಭಾರತೀಯ ಸೇನೆಯಿಂದ ಸ್ಫೂರ್ತಿ ಪಡೆದಿರುವ ಶಿವಾಸ್ ಭಾರತೀಯ ಸೈನಿಕರ ತ್ಯಾಗ , ಬಲಿದಾನ, ಸಮರ್ಪಣಾ  ಮನೋಭಾವಕ್ಕೆ   ಶಿವಾಸ್ ಸಂಸ್ಥೆಯು ತನ್ನ ವಿಶಿಷ್ಟ ಸೇವೆಯ ಮೂಲಕ ಗೌರವ ಸೂಚಿಸಲಿದೆ.

ಶಿವಾಸ್ ಸಿಬ್ಬಂದಿಗಳು ಸಮವಸ್ತ್ರ ಧರಿಸುವ ಮೂಲಕ ಭಾರತೀಯ ಸೈನಿಕರು ಎಂದೆಂದಿಗೂ ನಮ್ಮ ಹೃದಯದಲ್ಲಿ ಮತ್ತು ಮನಸ್ಸಿನಲ್ಲಿ ಇರುತ್ತಾರೆ ಎನ್ನುವುದಕ್ಕೆ  ನಿದರ್ಶನವಾಗಿರುತ್ತಾರೆ . ಮತ್ತು ಇದೊಂದು ಗೌರವ ಸೂಚಿಸುವ ಸಣ್ಣ ಅವಕಾಶವಾಗಿದೆ ಎಂಬುದು ಅವರ ಅಭಿಮತ.

ಶಿವಾಸ್ ಸಲ್ಯೂಟ್ ನ ಸಿಬ್ಬಂದಿಗಳು ಉತ್ತಮ ತರಭೇತಿ ಪಡೆದಿದ್ದು,  ಸೈನಿಕರ ರೀತಿಯ  ಹೇರ್ ಸ್ಟೈಲ್ ನ ಮೂಲಕ ನಮ್ಮ ಯೋಧರ ತ್ಯಾಗ ಮತ್ತು ಸಮರ್ಪಣೆಯನ್ನು ಈಗಿನ ಯುವಕರಿಗೆ ನೆನಪಿಸುವ ಪ್ರಯತ್ನವಾಗಿದೆ.

ನಮ್ಮ ಯೋಧರು ಗಡಿಯನ್ನು ಮಾತ್ರ ಕಾಯುವುದಲ್ಲ  , ನೈಸರ್ಗಿಕ ವಿಪತ್ತು ಸಂಭವಿಸಿದಾಗ ಜನರ ಪ್ರಾಣ ಮತ್ತು ಆಸ್ತಿಯನ್ನು ಕೂಡ ರಕ್ಷಿಸುವ ಮೂಲಕ ದೇಶಕ್ಕೆ ಬಹಳ ದೊಡ್ಡ ರೀತಿಯ ಕೊಡುಗೆ ಕೊಡುತ್ತಿದ್ದಾರೆ . ಇಂತಹ ಸಂದರ್ಭದಲ್ಲಿ ನಮ್ಮ ಸಮಾಜದ  ಡಾ| ಶಿವರಾಮ ಭಂಡಾರಿಯವರು ಶಿವಾಸ್ ಸಲ್ಯೂಟ್ ಎನ್ನುವ ಸಲೂನ್ ಪ್ರಾರಂಭಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.

ಡಾ| ಶಿವರಾಮ ಕೃಷ್ಣ ಭಂಡಾರಿಯವರು ಕೇವಲ ಮುಂಬೈನಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ತನ್ನ ಶಾಖೆಗಳನ್ನು ತೆರೆಯಲಿ, ಆ ಮೂಲಕ ಸಮಸ್ತ ಭಂಡಾರಿ ಸಮಾಜಕ್ಕೆ ಕೀರ್ತಿ ತರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ  ಹಾರೈಸಿಕೊಂಡು ಈ ಸಂದರ್ಭದಲ್ಲಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದೆ.

ಭಂಡಾರಿ ವಾರ್ತೆ

 

Leave a Reply

Your email address will not be published. Required fields are marked *