
ಮುಂಬಯಿಯ ಪ್ರತಿಷ್ಠಿತ ಶಿವಾಸ್ ಗ್ರೂಪ್ಸ್ ನಲ್ಲಿ ಉದ್ಯೋಗದಲ್ಲಿರುವ ಶ್ರೀ ಅರುಣ್ ಭಂಡಾರಿ ಮತ್ತು ಶ್ರೀಮತಿ ಸುಮಾ ಅರುಣ್ ಭಂಡಾರಿ ದಂಪತಿಗಳು ತಮ್ಮ ಮದುವೆಯ ಆರನೆಯ ವರ್ಷದ ವಾರ್ಷಿಕೋತ್ಸವವನ್ನು ಫೆಬ್ರವರಿ 26 ರ ಸೋಮವಾರ ಮಗ ಮಾಸ್ಟರ್ ಆಯುಷ್ ಅರುಣ್ ಭಂಡಾರಿ ಮತ್ತು ಬಂಧುಮಿತ್ರರೊಡಗೂಡಿ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು. 

ಸಕಲೇಶಪುರ ದೇವನಕೆರೆ ಶ್ರೀ ಚನ್ನಕೇಶವ ಭಂಡಾರಿ ಮತ್ತು ಶ್ರೀಮತಿ ಸವಿತಾ ಚನ್ನಕೇಶವ ಭಂಡಾರಿ ದಂಪತಿಗಳ ಮಗ ಅರುಣ್ ಮತ್ತು ತೀರ್ಥಹಳ್ಳಿ ಸೊನಲೆಯ ದಿವಂಗತ ಕೃಷ್ಣಪ್ಪ ಭಂಡಾರಿ ಮತ್ತು ಜಯಮ್ಮ ಕೃಷ್ಣಪ್ಪ ಭಂಡಾರಿ ದಂಪತಿಗಳ ಮಗಳು ಸುಮ ಇವರು ಮದುವೆಯಾಗಿ ಆರು ವರ್ಷಗಳನ್ನು ಸಂತೃಪ್ತಿಯಾಗಿ ಪೂರೈಸಿ ಏಳನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರಿಗೆ ಈ ಶುಭ ಗಳಿಗೆಯಲ್ಲಿ ದೇವನಕೆರೆ ಮತ್ತು ಸೊನಲೆಯ ಭಂಡಾರಿ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು, ಸಹೋದ್ಯೋಗಿಗಳು ಶುಭ ಹಾರೈಸಿದ್ದಾರೆ.
ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯ ನೀಡಿ ಸುಖ ಶಾಂತಿ ನೆಮ್ಮದಿಯಿಂದ ಬಾಳುವಂತೆ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಹೃತ್ಪೂರ್ವಕವಾಗಿ ಶುಭ ಕೋರುತ್ತದೆ.
-ಭಂಡಾರಿವಾರ್ತೆ