
ಶಿವಮೊಗ್ಗ ಜಿಲ್ಲೆ ಸೊರಬದ ತಿರುಮಲಾಪುರದಲ್ಲಿ ಶ್ರೀ ಪ್ರವೀಣ್ ಭಂಡಾರಿ ಮತ್ತು ಶ್ರೀಮತಿ ಭಾರತಿ ಪ್ರವೀಣ್ ಭಂಡಾರಿ ದಂಪತಿಯು ತಾವು ನೂತನವಾಗಿ ನಿರ್ಮಿಸಿದ
“ಶ್ರೀ ಗುರುಕೃಪಾ”



ನಿಲಯದ ಗೃಹಪ್ರವೇಶವನ್ನು ಫೆಬ್ರವರಿ 7,2019 ರ ಗುರುವಾರ ಶ್ರೀ ಲಕ್ಷ್ಮೀಸಹಿತ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಗಣಪತಿ ಹೋಮದೊಂದಿಗೆ ನೆರವೇರಿಸಿದರು.
ಶಿರಾಳಕೊಪ್ಪದ ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀಮತಿ ಲಕ್ಷ್ಮಮ್ಮ ನಾರಾಯಣ ಭಂಡಾರಿ ದಂಪತಿಯ ಪುತ್ರನಾದ ಶ್ರೀ ಪ್ರವೀಣ್ ಭಂಡಾರಿ ಸೊರಬದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಗೀತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಿರಾಳಕೊಪ್ಪದ ಶ್ರೀ ಬಾಲಚಂದ್ರ ಭಂಡಾರಿ ಮತ್ತು ಶ್ರೀಮತಿ ನಾಗರತ್ನ ಬಾಲಚಂದ್ರ ಭಂಡಾರಿ ದಂಪತಿಯ ಪುತ್ರಿಯಾದ ಶ್ರೀಮತಿ ಭಾರತಿ ಪ್ರವೀಣ್ ಭಂಡಾರಿ ಸೊರಬದ ಚಾಮರಾಜಪೇಟೆಯಲ್ಲಿ ಪ್ರಭಾ ಹರ್ಬಲ್ ಬ್ಯೂಟಿ ಪಾರ್ಲರ್ ಹೆಸರಿನ ಪಾರ್ಲರ್ ನಡೆಸುತ್ತಿದ್ದಾರೆ.ದಂಪತಿಗಳಿಗೆ ಅಭಿಲಾಷ್ ಮತ್ತು ಪ್ರಣವ್ ಎಂಬಿಬ್ಬರು ಗಂಡು ಮಕ್ಕಳಿದ್ದಾರೆ.


ಗೃಹಪ್ರವೇಶದ ಈ ಶುಭ ಸಂದರ್ಭದಲ್ಲಿ ಶಿರಾಳಕೊಪ್ಪ, ಸೊರಬ, ಕುಂದಾಪುರ, ಬಸ್ರೂರು, ಸಾಗರದ ಭಂಡಾರಿ ಬಂಧುಗಳು, ಗುರು ಹಿರಿಯರು, ಆತ್ಮೀಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಯಥೋಚಿತ ಸತ್ಕಾರ ಸ್ವೀಕರಿಸಿ, ಶುಭ ಹಾರೈಸಿದರು.
ನೂತನ ಗೃಹ ಪ್ರವೇಶದ ಸಂಭ್ರಮದಲ್ಲಿರುವ ಪ್ರವೀಣ್ ಮತ್ತು ಭಾರತಿ ದಂಪತಿಗಳಿಗೆ ಶ್ರೀದೇವರು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಿ ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಕೋರುತ್ತದೆ.
“ಭಂಡಾರಿವಾರ್ತೆ”