November 23, 2024
Supreeta

ಶ್ರೀ ಕೃಷ್ಣ ಅನೇಕ ಭಕ್ತರ ಪ್ರೀಯ ದೇವ, ಅಂತೆಯೇ ಆತನ ಜನ್ಮದಿನವೂ ನಮಗೆಲ್ಲ ವಿಶೇಷ. ಪ್ರತೀ ವರ್ಷ ಸಂಭ್ರಮ ಸಡಗರ ತುಂಬಿರುತಿದ್ದ ಅಷ್ಟಮಿ ಇತ್ತೀಚಿನ ವರ್ಷಗಳಲ್ಲಿ  ಸಡಗರ ಸ್ವಲ್ಪ ಕಡಿಮೆಯಾಗಿದೆ ಎನ್ನಬಹುದು.

 

ಹಾ! ಅಂದ ಹಾಗೆ ಈಗಲೂ ನೆನಪಿದೆ ಅಂದಿನ ಅಷ್ಟಮಿಯ ಸಡಗರ. ಹಿಂದಿನ ದಿನದಿಂದಲೇ ಹಬ್ಬದ ತಯಾರಿ ಶುರು. ಮನೆಮಂದಿಯೆಲ್ಲ ಕೂಡಿ “ಕೊಟ್ಟಿಗೆ”(ಬಾಳೆ ಎಲೆಯ ಒಂದು ಬಗೆಯ ತಿಂಡಿ), ಗುಂಡ(ಹಲಸಿನ ಎಲೆಯ ತಿಂಡಿ) ಮುಂತಾದ ತಿಂಡಿಗಳ ತಯಾರಿಗೆ ಆರಂಭ. ಅಷ್ಟಮಿಯ ದಿನ ಬಗೆ ಬಗೆಯ ಉಪಹಾರ, ಖಾದ್ಯ, ಸಿಹಿ ಊಟ. ಈ ಸಂಭ್ರಮದ ನಡುವೆ ಊರ ಮಂದಿ ಸೇರಿ ಊರಿನ ಒಂದು ಜಾಗದಲ್ಲಿ ಹಲವು ವಿಶೇಷ ಸ್ಪರ್ಧೆಗಳ ಆಯೋಜನೆ. ಮಕ್ಕಳು, ಹಿರಿಯರು ಕಿರಿಯರು ಎಲ್ಲಾ ಸೇರಿ ಆಟೋಟಗಳಲ್ಲಿ ಪಾಲ್ಗೊಂಡು ಬಹುಮಾನ ಗಿಟ್ಟಿಸಿಕೊಳ್ಳುವ ಖುಷಿ. ಕೃಷ್ಣನ ಬಾಲ್ಯವನ್ನು ಮೆಲುಕು ಹಾಕುವ ಸ್ಪರ್ಧೆಗಳು, ಎಲ್ಲವೂ ಹಬ್ಬದ ವಾತಾವರಣವನ್ನು ಪ್ರತೀ ಬಾರಿ ನೆನಪಿಸುವಂತೆ ಮಾಡುತ್ತದೆ.

 

ಆದರೆ  ಆ ಸಡಗರವೆಲ್ಲ ಇಂದು ಉಳಿದಿಲ್ಲ. ಎಲ್ಲವೂ ಆನ್ಲೈನ್ ಮಯ. ಜಗತ್ತಿಗೆ ಮಾರಿ ಎನಿಸಿರುವ ಕೋರೋನ ಕಾರಣದಿಂದ ಅಷ್ಟಮಿ ಮನೆ ಮಂದಿಗೆ ಮಾತ್ರ ಸೀಮಿತ ಎಂದೇ ಹೇಳಬಹುದು. ಊರ ಮಂದಿ ಸೇರಿ ಆಚರಿಸುತ್ತಿದ್ದ ಆಚರಣೆ ಇಂದು ಕಾಣ ಸಿಗುವುದು ಅಪರೂಪ. ಇಂದು ಕೃಷ್ಣ ಜನ್ಮಾಷ್ಟಮಿ ಆನ್ಲೈನಲಿ ಮುದ್ದು ಕೃಷ್ಣ ಸ್ಪರ್ಧೆಗೆ ಸೀಮಿತ ಎನ್ನಬಹುದು. ಕೇವಲ ಲೈಕ್ ಮತ್ತು ಶೇರ್ ಗಳ ನಡುವೆ ಅಷ್ಟಮಿಯ ಸ್ಪರ್ಧೆಗಳು ನಡೆಯುತ್ತಿದೆ. ಆದಷ್ಟು ಬೇಗ ಹಿಂದಿನ ಅಷ್ಟಮಿಯ ಸಂಭ್ರಮಾಚರಣೆ ನಮೆಗೆಲ್ಲ ಸಿಗಲಿ ಎನ್ನುವುದೇ ನನ್ನ ಆಶಯ.

ಸುಪ್ರೀತಾ ರವಿಶಂಕರ್ ಭಾಗಮಂಡಲ.

Leave a Reply

Your email address will not be published. Required fields are marked *