
ಮೂಡಬಿದಿರೆ ಕಲ್ಲಮುಂಡ್ಕೂರು ಕಲ್ಯಾಣಿ ನಿವಾಸ ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀಮತಿ ರೇಖಾ ಭಂಡಾರಿಯವರ ಪುತ್ರಿ. ಕುಮಾರಿ. ಶ್ರೇಯಾ ಭಂಡಾರಿ ಈ ವರ್ಷದ ದ್ವಿತೀಯ ಪಿಯುಸಿ ವಾಣಿಜ್ಯವಿಭಾಗದ ಪರೀಕ್ಷೆಯಲ್ಲಿ 578 (ಶೇ.96.33) ಅಂಕ ಗಳಿಸುವುದರೊಂದಿಗೆ ಕಲಿಕಾ ಜೀವನದಲ್ಲಿ ಅತ್ಯುನ್ನತ ಸಾಧನೆ ತೋರಿ ಗುರುಹಿರಿಯರು, ಹುಟ್ಟೂರು ಮತ್ತು ಪೋಷಕರಿಗೆ ಗೌರವ ತಂದುಕೊಟ್ಟಿದ್ದಾರೆ. ಇವರು ಅಳ್ವಾಸ್ ಪದವಿಪೂರ್ವ ಕಾಲೇಜು ಮೂಡಬಿದಿರೆಯ ವಿದ್ಯಾರ್ಥಿನಿಯಾಗಿರುತ್ತಾರೆ.

ಕಾಮರ್ಸ್ ವಿಭಾಗದ ವಿಷಯಗಳಾದ ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ ಮತ್ತು ಮೂಲಗಣಿತ ವಿಷಯಗಳಲ್ಲಿ ನೂರರಲ್ಲಿ ನೂರು ಅಂಕ ಪಡೆದು ದಾಖಲೆಯನ್ನು ಮಾಡಿದ್ದಾರೆ. ಇವರ ಈ ಸಾಧನೆ ಭಂಡಾರಿ ಸಮಾಜಕ್ಕೆ ಹೆಮ್ಮೆಯ ವಿಚಾರವಾಗಿದೆ.
ಕು. ಶ್ರೇಯಾ ಭಂಡಾರಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಮುಂದಿನ ವಿಧ್ಯಾಬ್ಯಾಸ ಮತ್ತು ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.
ಭಂಡಾರಿ ವಾರ್ತೆ