

ಭಂಡಾರಿ ಕುಟುಂಬದ ಮದುವೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಮದುವೆಯ ನೇರ ಪ್ರಸಾರವನ್ನು “ಭಂಡಾರಿವಾರ್ತೆ” ಆಯೋಜಿಸಿತ್ತು. ಭಂಡಾರಿವಾರ್ತೆ ವೆಬ್ಸೈಟ್ ಮತ್ತು ಫೇಸ್‌ಬುಕ್ ಗಳಲ್ಲಿ ಮದುವೆ ಕಾರ್ಯಕ್ರಮದ ನೇರಪ್ರಸಾರವನ್ನು ಜಗತ್ತಿನ ಮೂಲೆಮೂಲೆಗಳಲ್ಲಿರುವ ಭಂಡಾರಿ ಬಂಧುಗಳು, ಆತ್ಮೀಯರು ವೀಕ್ಷಿಸಿ ಸಂತಸಪಟ್ಟರು.
ನೂತನ ದಂಪತಿಗಳಿಗೆ ಭಗವಂತನು ಆಯುರಾರೋಗ್ಯ ಐಶ್ವರ್ಯ ಭಾಗ್ಯ ನೀಡಲಿ, ಅವರ ವೈವಾಹಿಕ ಜೀವನ ಸಂಭ್ರಮದ ಕಡಲಾಗಲಿ ಎಂದು ಭಂಡಾರಿವಾರ್ತೆ ತಂಡವು ಹೃದಯಪೂರ್ವಕವಾಗಿ ಹಾರೈಸುತ್ತದೆ.
“ಭಂಡಾರಿವಾರ್ತೆ ತಂಡ.”