
“ಶ್ರೀಪಾಲ್ ಮತ್ತು ರಮ್ಯಾ ದಂಪತಿಯ ಮೊದಲನೆ ವರ್ಷದ ವಿವಾಹ ವಾರ್ಷಿಕೋತ್ಸವ.”
ನೆಲ್ಯಾಡಿಯ ದಿವಂಗತ ನಾರಾಯಣ ಭಂಡಾರಿ ಮತ್ತು ರುಕ್ಮಿಣಿ ನಾರಾಯಣ ಭಂಡಾರಿ ದಂಪತಿಯ ಮೊಮ್ಮಗ ಮತ್ತು ದಿವಂಗತ ಸುಜಾತ ಭಂಡಾರಿಯವರ ಪುತ್ರ
ಶ್ರೀಪಾಲ್.
ಮತ್ತು ತೊಕ್ಕೊಟ್ಟು ಗಣೇಶ್ ನಗರದ ಶ್ರೀ ರವಿ ಭಂಡಾರಿ ಮತ್ತು ಪೂರ್ಣಿಮಾ ರವಿ ಭಂಡಾರಿ ದಂಪತಿಯ ಪುತ್ರಿ
ರಮ್ಯಾ ಶ್ರೀಪಾಲ್.
ದಂಪತಿಯು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ ವಿವಾಹ ಸಂಭ್ರಮಕ್ಕೆ ನವೆಂಬರ್ 26 ರ ಗುರುವಾರ ಮೊದಲ ವರ್ಷದ ವಾರ್ಷಿಕೋತ್ಸವ.
ಮದುವೆಯ ವಾರ್ಷಿಕೋತ್ಸವವನ್ನು ದಂಪತಿಯು ವಜ್ರದೇಹಿ ಮಠದಲ್ಲಿ ಮತ್ತು ಬಾಲ ಸಂರಕ್ಷಣಾ ಕೇಂದ್ರದ ಅನಾಥ ಮಕ್ಕಳೊಂದಿಗೆ ಸರಳವಾಗಿ ಆಚರಿಸಿಕೊಂಡು ಸಂಭ್ರಮಿಸಿದರು. ನಂತರ ಸಂಜೆ ತಮ್ಮ ಮನೆಯಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರೊಂದಿಗೆ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಸಂಭ್ರಮಿಸಿದರು.
ದಂಪತಿಗೆ ಅವರ ಕುಟುಂಬಸ್ಥರು, ಸ್ನೇಹಿತರು, ಹಿತೈಷಿಗಳು, ವಜ್ರದೇಹಿ ಮಠದ ಪರಮಪೂಜ್ಯ ಶ್ರೀಗಳಾದ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳು, ಮತ್ತು ಅನಾಥಾಶ್ರಮದ ಮಕ್ಕಳು ಶುಭ ಹಾರೈಸಿದರು.
ಮದುವೆಯ ವಾರ್ಷಿಕೋತ್ಸವದ ಈ ಶುಭ ಸಂದರ್ಭದಲ್ಲಿ ಶ್ರೀಪಾಲ್ ಮತ್ತು ರಮ್ಯಾ ದಂಪತಿಗೆ ಭಗವಂತನು ಅವರ ಸಕಲ ಇಷ್ಠಾರ್ಥಗಳನ್ನೂ ಪೂರೈಸಿ ಸನ್ಮಂಗಳವನ್ನುಂಟು ಮಾಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಮತ್ತು ತಂಡದಿಂದ ಹೃತ್ಪೂರ್ವಕ ಶುಭ ಹಾರೈಕೆಗಳು.
“ಭಂಡಾರಿವಾರ್ತೆ.”