September 20, 2024

ಬೇಕಾಗುವ ಸಾಮಾಗ್ರಿಗಳು:

ಸ್ವಚ್ಚಗೊಳಿಸಿದ ಸೀಗಡಿ- 1/4 ಕೆಜಿ
ಈರುಳ್ಳಿ-2
ತುಪ್ಪ-3ರಿಂದ 4 ಚಮಚ
ಹಸಿಮಣಸು -3(ಉದ್ದಕ್ಕೆ ಹೆಚ್ಚಿದ್ದು)
ಕರಿಬೇವು-15 ಎಸಳು
ಖಾರದ ಪುಡಿ -2 ಚಮಚ
ಕಾಳುಮೆಣಸಿನ ಪುಡಿ -1 ಚಮಚ
ದನಿಯಾ ಪುಡಿ -1 ಚಮಚ
ಗರಂಮಸಾಲ ಪುಡಿ-1 ಚಮಚ
ಅರಿಶಿನ-ಚಿಟಿಕೆ
ಉಪ್ಪು-ರುಚಿಗೆ ತಕ್ಕಷ್ಟು
ಸೋಯಾಸಾಸ್ -1 ಚಮಚ

ಮಾಡುವ ವಿಧಾನ:
        ಶುಚಿಗೊಳಿಸಿದ ಸೀಗಡಿ ಮೀನಿಗೆ ಅರಿಶಿನ,ಉಪ್ಪು,ಕಾಳು ಮೆಣಸಿನ ಪುಡಿ,1/2 ಚಮಚ ಗರಂಮಸಾಲೆ ಪುಡಿ,1ಚಮಚ ಖಾರದ ಪುಡಿ ಮತ್ತು ಸೋಯಾಸಾಸ್ ಹಾಕಿ ಚೆನ್ನಾಗಿ ಕಲೆಸಿ 1/2 ಗಂಟೆ ಇಡಬೇಕು.
ನಂತರ ಒಂದು ಬಾಣಲೆಯನ್ನು ಬಿಸಿಮಾಡಿ ಅದಕ್ಕೆ ತುಪ್ಪ ಹಾಕಿ ಅದು ಕಾದ ನಂತರ ಕರಿಬೇವು,ಹಸಿಮೆಣಸು,ಈರುಳ್ಳಿ ಹಾಕಿ ಚೆನ್ನಾಗಿ ಪ್ರೈ ಮಾಡಬೇಕು,ನಂತರ ಇದಕ್ಕೆ ಕಲಸಿಟ್ಟ ಸೀಗಡಿ ಹಾಕಿ 1/2 ಲೋಟ ನೀರು,ಹಾಗೇ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 6-8 ನಿಮಿಷ ಬೇಯಲು ಬಿಡಿ,ನಂತರ 1 ಚಮಚ ಖಾರದ ಪುಡಿ,ದನಿಯಾ ಪುಡಿ,1/2 ಚಮಚ ಗರಂಮಸಾಲ ಪುಡಿ ಹಾಕಿ ಚೆನ್ನಾಗಿ ಪ್ರೈ ಮಾಡಿದರೇ(ಬೇಕಾದಲ್ಲಿ ಕೊನೆಗೆ ನಿಂಬೆರಸ ಹಿಂಡಬಹುದು)ಸೀಗಡಿ ಪ್ರೈ ಸವಿಯಲು ಸಿದ್ದ.

ಪ್ರತಿಭಾ ಭಂಡಾರಿ,
ಹರಿಹರಪುರ

Leave a Reply

Your email address will not be published. Required fields are marked *