
ಮೂಡುಬಿದಿರೆ ಪುತ್ತಿಗೆಯ ಶ್ರೀ ಶೈಲೇಂದ್ರ ರಾಜ್ ಮತ್ತು ಶ್ರೀಮತಿ ಉಷಾ ಶೈಲೇಂದ್ರ ರಾಜ್ ದಂಪತಿ ಜನವರಿ 24, 2019 ರ ಗುರುವಾರ ತಮ್ಮ ವೈವಾಹಿಕ ಜೀವನದ ಇಪ್ಪತ್ತೈದನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮವನ್ನು ಅಲಂಗಾರು ಗೋಲ್ಡನ್ ರೆಸಿಡೆನ್ಸಿ ಯ ಸುರಭಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.


ಈ ಶುಭ ಸಂದರ್ಭದಲ್ಲಿ ದಂಪತಿಗಳಿಗೆ ಮಗಳು ಶ್ರೀಮತಿ ಶ್ರೀಷಾ ಭಂಡಾರಿ,ದ್ವಿತೀಯ ಪುತ್ರಿ ಕುಮಾರಿ ನಿಶಾ ಹಾಗೂ ಬಂಧು ಬಳಗದವರು ಶುಭ ಹಾರೈಸಿದ್ದಾರೆ.



ದಾಂಪತ್ಯ ಜೀವನದ ರಜತ ಮಹೋತ್ಸವದ ಸಂಭ್ರಮದಲ್ಲಿರುವ ಶ್ರೀ ಶೈಲೇಂದ್ರ ರಾಜ್ ಮತ್ತು ಶ್ರೀಮತಿ ಉಷಾ ಶೈಲೇಂದ್ರ ರಾಜ್ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃದಯಪೂರ್ವಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”