
ಕುಂದಾಪುರ ಸಾಯಬ್ರಕಟ್ಟೆ ಬಳಿಯ ಅಚ್ಲಾಡಿ ವಾಸಿಯಾಗಿರುವ ಶ್ರೀ ದೇವು ಭಂಡಾರಿಯವರ ಧರ್ಮಪತ್ನಿ ಸುಶೀಲಾ ದೇವು ಭಂಡಾರಿ ಅಚ್ಲಾಡಿ ಯವರು ವಯೋಸಹಜ ಅನಾರೋಗ್ಯದಿಂದ ಸೆಪ್ಟೆಂಬರ್ 3 ರ ಸೋಮವಾರ ರಾತ್ರಿ 8:40 ಕ್ಕೆ ಕೊನೆಯುಸಿರೆಳೆದಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಸಾಮಾಜಿಕ ಕ್ಷೇತ್ರದಲ್ಲಿ ತುಂಬಾ ಚಟುವಟಿಕೆಯಿಂದ ಪಾಲ್ಗೊಳ್ಳುತ್ತಿದ್ದ ಇವರು ವಡ್ಡರ್ಸೆ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾಗಿದ್ದರು. ಶಿರಿಯಾರ ವ್ಯಾವಸಾಯಿಕ ಸಹಕಾರಿ ಸಂಘದ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಸುಶೀಲಾ ದೇವು ಭಂಡಾರಿಯವರು ಸ್ತ್ರೀಶಕ್ತಿ ಫೌಂಡೇಷನ್ ಎಜುಕೇಶನ್ ಟ್ರಸ್ಟ್ ನ ಸದಸ್ಯರಲ್ಲೊಬ್ಬರಾಗಿ ಸೇವೆ ಸಲ್ಲಿಸುತ್ತಿದ್ದರು. ಸ್ಥಳೀಯವಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದ ಇವರು ಜನಾನುರಾಗಿಯಾಗಿದ್ದರು.
ಸುಶೀಲಾ ದೇವು ಭಂಡಾರಿಯವರು ತಮ್ಮ ಪತಿ ಶ್ರೀ ದೇವು ಭಂಡಾರಿ, ಮಕ್ಕಳಾದ ಶ್ರೀ ಅಜಿತ್.ಡಿ.ಭಂಡಾರಿ, ಶ್ರೀ ಅನಿಲ್.ಡಿ.ಭಂಡಾರಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಮೃತರ “ವೈಕುಂಠ ಸಮಾರಾಧನೆ” ವನ್ನು ಸೆಪ್ಟೆಂಬರ್ 16 ರ ಭಾನುವಾರ “ಅರ್ಕ ಮಹಾಗಣಪತಿ ಕ್ಷೇತ್ರ.ಗರಿಕೆಮಠ.” ದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದ್ದು, ಸಮಸ್ತ ಭಂಡಾರಿ ಕುಟುಂಬಸ್ಥರು ಈ ಪುಣ್ಯಕಾರ್ಯಕ್ಕೆ ಆಗಮಿಸಬೇಕೆಂದು ಕೋರಿಕೊಂಡಿದ್ದಾರೆ.
ಕುಟುಂಬದ ಹಿರಿಯರ ಅಗಲಿಕೆಯಿಂದ ದುಃಖತಪ್ತರಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಿ,ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.
-ಭಂಡಾರಿವಾರ್ತೆ.