January 18, 2025
Jalajabhandary Udupi
ದಿವಂಗತ ಗೋವಿಂದ ಭಂಡಾರಿಯವರ ಪತ್ನಿ ಜಲಜ ಭಂಡಾರಿ (88ವರ್ಷ ) ತಾರೀಕು ಜೂನ್ 20ರಂದು ಗುಂಡಿಬೈಲಿನಲ್ಲಿರುವ ಮಗನ ಮನೆಯಲ್ಲಿ ಬೆಳಿಗ್ಗೆ 5.30ಕ್ಕೆ  ನಿಧನರಾಗಿದ್ದಾರೆ. 
 
 
ಇವರು ತನ್ನ 8 ಮಕ್ಕಳು ಮತ್ತು ಸೊಸೆಯಂದಿರು/ಅಳಿಯಂದಿರಾದ ಶ್ರೀಮತಿ ಸುಂದರಿ ಲೇಲಪ್ಪ ಭಂಡಾರಿ ಮುಂಬೈ, ಶ್ರೀ ಅಣ್ಣಯ್ಯ ಭಂಡಾರಿ ಸೂರಾಲು ಮತ್ತು ಶ್ರೀಮತಿ ಸುನೀತಾ (ಸೊಸೆ), ಶ್ರೀಮತಿ ಗೀತಾ ಪ್ರಭಾಕರ ಭಂಡಾರಿ ಪಳ್ಳಿ, ವಸಂತಿ ವಿಠ್ಠಲ ಭಂಡಾರಿ ಕಿನ್ನಿಗೋಳಿ, ಶ್ರೀ ಜಯ ಭಂಡಾರಿ ಮುಂಬೈ ಪುಷ್ಪ (ಸೊಸೆ), ಶ್ರೀ ಸುಭಾಷ್ ಭಂಡಾರಿ ಟೈಲರ್ ಉಡುಪಿ ಮತ್ತು ಶ್ರೀಮತಿ ಸುಮತಿ (ಸೊಸೆ) ಶ್ರೀಮತಿ ಇಂದಿರಾ ರಾಜು ಭಂಡಾರಿ ಮುಂಬೈ ಮತ್ತು ಶ್ರೀಮತಿ ಶಶಿಕಲಾ ವಸಂತ ಭಂಡಾರಿ ಪುತ್ತೂರು ಮುಂತಾದವರು, ಮೊಮ್ಮಕ್ಕಳು, ಮರಿ ಮಕ್ಕಳು ಹಾಗೂ ಅಪಾರ ಬಂಧುಮಿತ್ರರರನ್ನು ಅಗಲಿರುತ್ತಾರೆ.
 
ಇವರ ಪುತ್ರರಲ್ಲಿ ಶ್ರೀ ಸುಭಾಷ್ ಭಂಡಾರಿ ಟೈಲರ್  ಗುಂಡಿಬೈಲು,  ಕಚ್ಚೂರು ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದು, ನಿರಂತರವಾಗಿ ತನ್ನ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. 
 
ಇವರ ಬಂಧುಬಳಗ ಮೊಮ್ಮಕ್ಕಳಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಶ್ರೀ ಕಚ್ಚೂರು ನಾಗೇಶ್ವರ ದೇವರು ಕರುಣಿಸಲೆಂದು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ. 
 
 
 
-ಭಂಡಾರಿ ವಾರ್ತೆ
 

Leave a Reply

Your email address will not be published. Required fields are marked *