
ಮಾರೂರು ಶ್ರೀ ಶಾಂಭ ಭಂಡಾರಿಯವರ ಪತ್ನಿ ಶ್ರೀಮತಿ ನಳಿನಾಕ್ಷಿ ಭಂಡಾರಿ ಅಲ್ಪ ಕಾಲದ ಅನಾರೋಗ್ಯದಿಂದ 23.05.2018 ರ ಬುಧವಾರ ಮುಂಜಾವು 2.30 ಕ್ಕೆ ಕೊನೆಯುಸಿರೆಳೆದರು .ಅವರಿಗೆ ಸುಮಾರು 56 ವರ್ಷ ವಯಸ್ಸಾಗಿತ್ತು.
ದಿವಂಗತ ನಳಿನಾಕ್ಷಿ ಭಂಡಾರಿಯವರು ಪತಿ ಶ್ರೀ ಶಾಂಭ ಭಂಡಾರಿ,ಎರಡು ಗಂಡು ಮಕ್ಕಳಾದ ಮಧುರ ಮತ್ತು ಮನೋಹರ್ ಹಾಗೂ ಒಬ್ಬಳು ಹೆಣ್ಣು ಮಗಳಾದ ಮಲ್ಲಿಕಾ ಮತ್ತು ಸೊಸೆ ರಂಜಿತಾ ಮೊಮ್ಮಗ ಮಧ್ವಿತ್,,ಬಂಧು ವರ್ಗದವರು ಹಾಗೂ ಅಪಾರ ಹಿತೈಷಿಗಳನ್ನು ಅಗಲಿದ್ದಾರೆ .
ಶ್ರೀ ದೇವರು ಅವರ ಕುಟುಂಬಸ್ಥರಿಗೆ, ಆತ್ಮೀಯರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕೊಟ್ಟು, ಅಗಲಿದ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಪ್ರಾರ್ಥಿಸುತ್ತದೆ.

ವರದಿ : ಸಂದೇಶ್ ಭಂಡಾರಿ ಮಾರ್ನಾಡು