January 18, 2025
Prameela Jaya Kishore

ಬಂಟ್ವಾಳ ತಾಲೂಕು ಮಂಚಿ ಗ್ರಾಮ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶ್ರೀಮತಿ ಪ್ರಮೀಳಾ ಜಯ ಕಿಶೋರ್ ಸ್ಪರ್ಧಿಸಿ ಸುಮಾರು 419 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ.

ಇವರು ಮಂಚಿ ಗ್ರಾಮ ಪಂಚಾಯತ್ ಗೆ ಇದೀಗ ಮೂರನೇ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಮಂಚಿ ಗ್ರಾಮ ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷೆ ಯಾಗಿ ಮಂಚಿ ಗ್ರಾಮದ ಅಭಿವೃದ್ಧಿಗಾಗಿ ಈಗ ದೊಡ್ಡ ಮೊತ್ತದ ಅನುದಾನವನ್ನು ತಂದು ಅಭಿವೃದ್ಧಿಗಾಗಿ ಉತ್ತಮ ಸಾಧನೆ ಮಾಡಿದ್ದಾರೆ ಬಂಟ್ವಾಳ ತಾಲ್ಲೂಕು ಬಿಜೆಪಿ ಕ್ಷೇತ್ರ ಸಮಿತಿಯ ಸದಸ್ಯರಾಗಿ ಮಂಚಿ ಗ್ರಾಮದ ನವೋದಯದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ರೀಮತಿ ಪ್ರಮೀಳಾ ಜಯ ಕಿಶೋರ್ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ಉನ್ನತ ಸ್ಥಾನ ಲಭಿಸುವಂತಾಗಲಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆ

ಶ್ರೀಮತಿ ಪ್ರಮೀಳಾ ಜಯ ಕಿಶೋರ್ ಇವರ ಮೊಬೈಲ್ ಸಂಖ್ಯೆ
9632300404.

ಭಂಡಾರಿ ವಾರ್ತೆ

Leave a Reply

Your email address will not be published. Required fields are marked *