
ಬೆಳ್ತಂಗಡಿ ತಾಲೂಕು ನಾರವಿ ಚರ್ಚ್ ರಸ್ತೆಯ ಮಮ್ತಾಜ್ ಕಾಂಪ್ಲೆಕ್ಸ್ ನಲ್ಲಿ ಕಲ್ಯಾರು ಶ್ರೀಮತಿ ರಮ್ಯಾ ರೋಹಿತ್ ಭಂಡಾರಿಯವರ “ವಿಶು ಹರ್ಬಲ್ ಲೇಡೀಸ್ ಬ್ಯೂಟಿ ಪಾರ್ಲರ್ ಮತ್ತು ಫ್ಯಾನ್ಸಿ ಸ್ಟೋರ್ಸ್” ಫೆಬ್ರವರಿ 1,2019 ಶುಕ್ರವಾರ ಶುಭಾರಂಭಗೊಂಡಿತು.

ಶ್ರೀಮತಿ ರಮ್ಯಾ ರೋಹಿತ್ ಭಂಡಾರಿಯವರು ತಮ್ಮ ವಿಶು ಲೇಡೀಸ್ ಹರ್ಬಲ್ ಬ್ಯೂಟಿ ಪಾರ್ಲರ್ ನಲ್ಲಿ ಮಹಿಳೆಯರ ಸೌಂದರ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ ಹೇರ್ ಕಟ್ಟಿಂಗ್, ಹೇರ್ ಮಸಾಜ್, ಹೇರ್ ಸ್ಟ್ರೈಟ್ನಿಂಗ್, ಫೇಷಿಯಲ್, ಮದುಮಗಳ ಶೃಂಗಾರ ಮತ್ತು ಮೆಹಂದಿ ಮುಂತಾದ ಸೇವೆಗಳನ್ನು ನೀಡಲಾಗುವುದು ಎಂದು ತಮ್ಮ ಸಂತಸವನ್ನು ಭಂಡಾರಿವಾರ್ತೆಯೊಂದಿಗೆ ಹಂಚಿಕೊಂಡರು.




ನಾರವಿ ಪರಿಸರದಲ್ಲಿ ಉತ್ತಮ ಸೇವೆಯನ್ನು ನೀಡುವುದರ ಮೂಲಕ ಬ್ಯೂಟಿ ಪಾರ್ಲರ್ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”