
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭಂಡಾರಿ ಸಮಾಜದ ಶ್ರೀ ಸತ್ಯನಾರಾಯಣ ಭಂಡಾರಿ ಸಾಗರ ಇವರ ಪತ್ನಿ ಶ್ರೀಮತಿ ಸರೋಜಾ ಬಿ ಸಾಗರದ ಜೆ ಪಿ ನಗರದ ಮಂಕೋಡು ಬಡಾವಣೆಯ ಎರಡನೇ ವಾರ್ಡ್ ನಲ್ಲಿ ಬಿ ಜೆ ಪಿ ಯಿಂದ ಸ್ಪರ್ಧಿಸಿ ತನ್ನ ಸಮೀಪದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಶ್ರೀಮತಿ ಲಲಿತಮ್ಮ ರನ್ನು ಸುಮಾರು 218 ಮತಗಳಿಂದ ಸೋಲಿಸಿ ಜಯ ಸಾಧಿಸಿದ್ದಾರೆ .

ಈ ಸಂದರ್ಭದಲ್ಲಿ ಪತಿ ಸತ್ಯನಾರಾಯಣ ಭಂಡಾರಿ ಮಕ್ಕಳಾದ ಸಂತೋಷ್ ಭಂಡಾರಿ ಸಾಗರ,
ಆಶಾ ದೇವರಾಜ್, ಮಧು ಭಂಡಾರಿ ,ಉಷಾ ಭಂಡಾರಿ, ಸಹೋದರರಾದ ಕೃಷ್ಣಮೂರ್ತಿ ಭಂಡಾರಿ ಮತ್ತು ಕುಟುಂಬಸ್ಥರು, ಆನಂದ್ ಭಂಡಾರಿ ಮತ್ತು ಕುಟುಂಬಸ್ಥರು
ಹಾಗೂ ಬಂಧುಮಿತ್ರರು ಶುಭಾಶಯ ಕೋರಿದ್ದಾರೆ .
ಶ್ರೀಮತಿ ಸರೋಜಾ ರಿಗೆ ಅವರನ್ನು ಗೆಲ್ಲಿಸಿರುವ ವಾರ್ಡ್ ನ ಅಭಿವೃದ್ಧಿ ಮಾಡುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ರಾಜಕೀಯದಲ್ಲೂ ಎಲ್ಲಾ ಅಡೆತಡೆಗಳನ್ನು ಮೀರಿ ಬೆಳೆಯುವ ಸಹನೆ ಧೈರ್ಯ ಬೆಂಬಲ ದೊರೆಯಲೆಂದು ಭಂಡಾರಿ ವಾರ್ತೆ ಪ್ರಾರ್ಥಿಸಿಕೊಂಡು ಶುಭ ಹಾರೈಸುತ್ತಿದೆ.
ಭಂಡಾರಿ ವಾರ್ತೆ