January 19, 2025
Shanthi

ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಮತ್ತು ಮಂಗಳೂರು ಕಚ್ಚೂರು ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿಯ ನಿರ್ದೇಶಕ ಉಡುಪಿ ಪೆರ್ಡೂರು ಕುಮಾರ್ ಭಂಡಾರಿ ಅವರ ಧರ್ಮಪತ್ನಿ ಶ್ರೀಮತಿ ಶಾಂತಿ (67 ವರ್ಷ) 10.07.2022 ಆದಿತ್ಯವಾರ ರಾತ್ರಿ 8:30 ಕ್ಕೆ ಮಣಿಪಾಲ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ವಿಧಿವಶರಾದರು.

ಮೃತರು ಪತಿ ಕುಮಾರ್ ಭಂಡಾರಿ, ಪುತ್ರರಾದ ಅಬುಧಾಬಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ ವಿಜಯಕುಮಾರ್ ಮತ್ತು ಅಮೆರಿಕದ ಕೆಂಟಕಿಯಲ್ಲಿ ಸೂಪರ್ ಸ್ಪೆಷಲಿಸ್ಟ್ ಮಕ್ಕಳ ತಜ್ಞರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ॥ ಪ್ರಸಾದ್ , ಸಹೋದರ ಪ್ರಕಾಶ್ ಭಂಡಾರಿ ಬೆಂಗಳೂರು ಸಹೋದರಿ ಭಾರತಿ ಲೋಕಯ್ಯ ಉಡುಪಿ ಹಾಗೂ ಸೊಸೆಯಂದಿರು ಐದು ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ.

ಇವರ ಅಂತ್ಯಕ್ರಿಯೆಯ ವಿಧಿ ವಿಧಾನಗಳು 11/07/2022 ಸೋಮವಾರ  ಪೆರ್ಡೂರುನಲ್ಲಿ ಜರಗಿತು.

ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಿ ಪತಿ ಮಕ್ಕಳು ಹಾಗೂ ಕುಟುಂಬಸ್ಥರಿಗೆ ಅಗಲುವಿಕೆ ಶಕ್ತಿಯನ್ನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಪ್ರಾರ್ಥನೆ.

Leave a Reply

Your email address will not be published. Required fields are marked *