ಸ್ನೇಹ ಸಾಂಗತ್ಯ.
ಸ್ನೇಹಿತರಿಲ್ಲದ ಜೀವ ಎಲ್ಲುಂಟು?
ರಕ್ತ ಸಂಬಂಧಕೂ ಮೀರಿದ ಅನುಬಂಧವುಂಟು.
ಗೆಳೆಯರು ಬಲ್ಲರು ಬಾಳಿನ ಒಳಗುಟ್ಟು.
ಅಲ್ಲೊಂದು ಮುದ್ದಾದ ಭಾಂದವ್ಯವುಂಟು…!
ರಕ್ತ ಸಂಬಂಧಕೂ ಮೀರಿದ ಅನುಬಂಧವುಂಟು.
ಗೆಳೆಯರು ಬಲ್ಲರು ಬಾಳಿನ ಒಳಗುಟ್ಟು.
ಅಲ್ಲೊಂದು ಮುದ್ದಾದ ಭಾಂದವ್ಯವುಂಟು…!
ಪ್ರತಿಕ್ಷಣ ಜೊತೆಗಿರುವೆನೆಂದು ಭಾಷೆ ನೀಡಿದ ಪ್ರೀತಿಯೇ ಬಿಟ್ಟು ಹೋದರೂ…
ಪ್ರತಿಕ್ಷಣ ತುಂಟತನವಾಡಿದ ಜಗಳವಾಡಿದ ಗೆಳೆತನ ಬಿಟ್ಟುಹೋಗದು…!
ಗೆಳೆತನಕ್ಕೆ ಜಾತಿಯ ಅರಿವಿಲ್ಲ,
ಭಾಷೆಯ ಮಿತಿಯಿಲ್ಲ,
ಗಂಡು ಹೆಣ್ಣೆಂಬ ಭೇದವಿಲ್ಲ,
ಧರ್ಮದ ಗೋಡೆಯಿಲ್ಲ,
ಅಧ್ಭುತ ಲೋಕವೇ ಈ ಸ್ನೇಹಲೋಕ…!
ಅದೆಷ್ಟು ತುಂಟತನ,
ಅದೆಷ್ಟು ಸುತ್ತಾಡಿದ ದಿನ,
ಅದೆಷ್ಟು ನಲಿವು,ಕೊರತೆಯಿಲ್ಲ ಜಗಳಕೆ,
ಆದರೂ ಗೆಳೆತನಕೆ
ಮಿತಿಮೀರಿದ ನಂಬಿಕೆ…!
ನಾ ನಿನ್ನ ಪ್ರತಿಕ್ಷಣ ಪ್ರೀತಿಸುವೆ
ಆದರೆ,
ನಾ ನಿನ್ನ ಪ್ರೆಯಸಿಯಲ್ಲ.
ನಾ ನಿನ್ನ ಏಳುಬೀಳುಗಳಲ್ಲಿ ಜೊತೆಗಿರುವೆ
ಆದರೆ,
ನಾನು ನಿನ್ನ ಸಂಬಂಧಿಯಲ್ಲ.
ಆದರೂ ನಿನ್ನ ಒಬ್ಬಂಟಿಯಾಗಿ ಬಿಡಲಾರೆ
ಯಾಕೆಂದರೆ ನಾನು ನಿನ್ನ ನಿಜವಾದ ಸ್ನೇಹಿತೆ…!
ಅನೇಕ ಸಂಬಂಧಗಳು ಜೊತೆಗಿರುವುದಕ್ಕಿಂತ
ನಲಿವಿಗೆ ಸಹಕರಿಸುವ,
ನೋವಿಗೆ ಸ್ಪಂದಿಸುವ,
ಎಡವಿ ಬಿದ್ದಾಗ ಮೇಲೆತ್ತುವ
ಒಂದು ನಿಜವಾದ ಸ್ನೇಹ
ಸನಿಹವಿದ್ದರೆ ಸಾಕಲ್ಲವೆ..???
✍ ಗ್ರೀಷ್ಮಾಭಂಡಾರಿ ಕಲ್ಲಡ್ಕ