“ಎರಡು ಶರೀರಗಳಲ್ಲಿ ವಾಸಿಸುವ ಒಂದೇ ಆತ್ಮವೇ ಸ್ನೇಹ.”ಎಷ್ಟು ಅರ್ಥಗರ್ಬಿತವಾದ ವಾಕ್ಯ.ಅರಿಸ್ಟಾಟಲ್ ಹೇಳಿದ ಈ ಮಾತು ಸತ್ಯವಾದ ಸಂಗತಿ.ರಕ್ತಸಂಬಂಧವೇ ಇಲ್ಲದೆ ಜಾತಿ,ಕುಲ,ಧರ್ಮ,ವರ್ಣ ಭೇದವಿಲ್ಲದೆ ಜೊತೆಜೊತೆಯಾಗಿ ಸಾಗುವ ಬಂಧ ಒಂದಿದ್ದರೆ ಅದು ಗೆಳೆತನ ಮಾತ್ರ.ಆಗಸ್ಟ್ ತಿಂಗಳಿನ ಮೊದಲ ಭಾನುವಾರವನ್ನು ಫ್ರೆಂಡ್ ಷಿಪ್ ಡೇ ಎಂದು ಆಚರಿಸಲಾಗುತ್ತದೆ.
ಮೊದಲು ಶಾಲಾ-ಕಾಲೇಜುಗಳಲ್ಲಿ ಒಬ್ಬರಿಗೊಬ್ಬರು ವಿಶ್ ಮಾಡುತ್ತಾ ಬ್ಯಾಂಡ್ ಕಟ್ಟಿಕೊಳ್ಳುತ್ತಾ ಆ ದಿನವನ್ನು ಸಂಭ್ರಮದಿಂದ ಕಳೆಯಲಾಗುತ್ತಿತ್ತು.ಈಗಲೂ ಹಾಗೇ ಇದೆ,ಆದರೆ ಮುಂಚಿತವಾಗಿ ಸಾಮಾಜಿಕಜಾಲಾತಾಣಗಳಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿ ಆಗಿರುತ್ತದೆ.
ಗೆಳೆತನ ಎಂದರೆ ಅದೊಂದು ಸಿಹಿಯಾದ ಅನುಭವ.ವರ್ಣಿಸಲಾಗದ ಅನುಭಂದ.ಎಷ್ಟು ಹೇಳಿದರೂ ಅದು ಕಡಿಮೆ ಎಂದೇ ಅನಿಸುತ್ತದೆ.ಅದೆಷ್ಟೋ ಜಗಳ,ಹುಸಿಮುನಿಸು,ಮೌನದಿಂದಲೇ ಯುದ್ಧ ಮಾಡುತ್ತಾರೆ ಸ್ನೇಹಿತರು.ಆದರೂ ಅವೆಲ್ಲವನ್ನೂ ಮೀರಿ ಅವರ ನಡುವೆ ಒಬ್ಬರನೊಬ್ಬರು ಅಗಲಿರದ ಭಾಂದವ್ಯ ಇರುತ್ತದೆ.ತಮ್ಮ ವೈಯುಕ್ತಿಕ ಸಮಸ್ಯೆಗಳು ಎಷ್ಟೇ ಇರಲಿ ಗೆಳೆಯರೊಂದಿಗೆ ಹೇಳಿಕೊಂಡರೆ ಅದೆಲ್ಲಾ ಮಾಯವಾದಂತೆ ಮನಸ್ಸು ಹಗುರವಾಗುತ್ತದೆ.
ಸ್ನೇಹಿತರೊಂದಿಗೆ ಕಳೆದ ಯಾವುದಾದರೂ ಅವಿಸ್ಮರಣೀಯ ಘಟನೆಯನ್ನು ವಿಶ್ಲೇಷಣೆ ಮಾಡುವ ಎಂದರೆ ಅದು ನನ್ನಿಂದ ಸಾಧ್ಯವೇ ಇಲ್ಲ. ಯಾಕೆಂದರೆ ಅವರೊಂದಿಗೆ ಇರುವ ಒಂದೊಂದು ಕ್ಷಣವು ಮರೆಯಲಾಗದಂತಹ ಸಂತೋಷ ನೀಡಿದೆ.ಒಬ್ಬ ಪ್ರಾಣ ಸ್ನೇಹಿತ ಹತ್ತುಸಾವಿರ ಸಂಬಂಧಿಕರಿಗೆ ಸಮ.ಇದಕ್ಕಿಂತ ಸುಂದರ ವಿವರಣೆ ಗೆಳೆತನಕ್ಕೆ ಬೇರುಂಟೇ??
“ಸುಖದಲ್ಲೂ ಭಾಗಿಯಾಗಿ ಕಷ್ಠದಲ್ಲೂ ಹೆಗಲು ನೀಡಿ ಪ್ರತಿಕ್ಷಣ ಜೊತೆಗಿರುವವರೇ ನಿಜವಾದ ಸ್ನೇಹಿತರು…”