ಸ್ನೇಹಾಮೃತ.
ಹಸಿದ ಹೊಟ್ಟೆಗೆ ಯಾರೂ ಹಾಕಲಿಲ್ಲ ಊಟಕ್ಕೆ ಮಣೆ.
ಗೆಳೆಯರ ಗೆಳೆತನ ಕ್ಷಣದಲಿ ಮಾಡಿತು ಹಸಿವನೇ ಕಾಣೆ.
ಕಣ್ಣೆದುರೇ ಕಂಡರೂ ಊಟಕ್ಕೆ ಇಲ್ಲದ ಬಡವನ ಬವಣೆ.
ಕಣ್ಣಲಿ ಕಣ್ಣಿಟ್ಟು ಕಾಪಿಟ್ಟು ಕಾಪಾಡಿತು ಸ್ನೇಹಿತರ ಸ್ಮರಣೆ.
ಹಸಿವಿನ ಕಷ್ಟ ನೋಡಿ ಸುಮ್ಮನೆ ಹೋದರು ಜನ ತೋರದೇ ಕರುಣೆ.
ಹಸಿವನೇ ಅಣಕಿಸಿ ನಕ್ಕಿತು ಗೆಳೆಯ
ಗೆಳತಿಯರ ಮನ್ನಣೆ.
ಸುಸ್ಥಿತಿಯಲ್ಲಿ ಇರುವಾಗ ಜೊತೆಗೆ ಇದ್ದವರೂ ಕಷ್ಟದಲ್ಲಿ ಕಾಣೆ.
ಸ್ಥಿತಿಗತಿ ನೋಡದೆ ಸಮಸ್ಥಿತಿ
ನೀಡಿದ ಗೆಳೆಯರೇ ಜಾಣ ಜಾಣೆ.
ಹಸಿವಿನಿಂದ ದಿನವೂ ನಿದ್ದೆ ಬಾರದೆ ಬಡವನ ಜಾಗರಣೆ.
ಗೆಳೆಯನ ಜತನದಿ ಕಾಣುವುದೊಂದೆ
ಗೆಳೆತನಕಿರುವ ಮನ್ನಣೆ.
ಈ ಜಗತ್ತಿನ ಜನ ಒಂದು ತುತ್ತು ಇಂಥವರಿಗೆ ಅನ್ನ ನೀಡದೇ ಏನು ಪ್ರಯೋಜನ ದಿನವೂ ಮಾಡಿದರೆ ದೇವರ ಸ್ಮರಣೆ..
ಗೆಳೆತನ ಸ್ನೇಹಜೀವನವು ಅಂತರ ಅಳಿಸಲು ದೈವ ಕರುಣಿಸಿದ ಕರುಣೆ….
✍ ಹರೀಶ್ ನಾರ್ವೆ.