September 20, 2024

ಬಳಸಬೇಕಾದ ಪದಾರ್ಥಗಳು:

  • 5 ಬೇಯಿಸಿದ ಮೊಟ್ಟೆ
  •  2 ಟೇಬಲ್ ಸ್ಪೂನ್  ತುಪ್ಪ 
  • 1/4 ಕಪ್ ಹಾಲು
  • 4 ಲವಂಗ
  • 1 ಇಂಚು ದಾಲ್ಚಿನ್ನಿ
  • 3 ಏಲಕ್ಕಿ
  • 1 ಸ್ಟಾರ್ ಅನಿಸ್
  • ಕತ್ತರಿಸಿದ 2 ಮಧ್ಯಮ ಈರುಳ್ಳಿ
  • 1 ಟೇಬಲ್ ಸ್ಪೂನ್ ಮೆಣಸು ಪುಡಿ
  • 1 ಟೇಬಲ್ ಸ್ಪೂನ್ ಗರಂ ಮಸಾಲಾ ಪುಡಿ
  • 1½ ಟೇಬಲ್ ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್
  • ರುಚಿಗೆ ಉಪ್ಪು
  • 1½ ಟೇಬಲ್ ಸ್ಪೂನ್ ಬಾದಾಮಿ ಪೇಸ್ಟ್
  • 3-4 ಹಸಿರು ಮೆಣಸಿನಕಾಯಿಗಳು, 
  • ½ ಟೀ ಚಮಚ ಹಸಿರು ಏಲಕ್ಕಿ ಪುಡಿ
  • ½ ಕಪ್ ಮೊಸರು,
  • 1½ ಟೇಬಲ್ ಸ್ಪೂನ್ ತಾಜಾ ಕೆನೆ

ಎಗ್ ಕುರ್ಮಾ ತಯಾರಿ ವಿಧಾನ:

ಮೊದಲು ಮೊಟ್ಟೆಗಳನ್ನು ಕುದಿಸಿ ಮೊಟ್ಟೆಗಳು ಬೆಂದ ನಂತರ ಮೃಧುವಾಗಿ ಸಿಪ್ಪೇ  ತೆಗೆದು ಪಕ್ಕಕ್ಕೆ ಇಟ್ಟುಕೊಳ್ಳಿ.
 ಒಂದು ಪ್ಯಾನ್ ನಲ್ಲಿ 3 ಟೇಬಲ್ ಸ್ಪೂನ್ ತುಪ್ಪ ಸೇರಿಸಿ.  ತುಪ್ಪ ಕಾದ ನಂತರ  1 ಇಂಚು ದಾಲ್ಚಿನ್ನಿ, 4 ಲವಂಗ, 3 ಏಲಕ್ಕಿ, 1 ಸ್ಟಾರ್ ಅನಿಸ್, ತದನಂತರ ಸಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸಿ. ಈರುಳ್ಳಿ ಚೆನ್ನಾಗಿ ಬೆಂದು ಬಣ್ಣವನ್ನು ಬದಲಾಯಿಸುವಾಗ ಹಸಿಮೆಣಸು , ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 30 ಸೆಕೆಂಡುಗಳ ಕಾಲ ಬೇಯಿಸಿ. ಈಗ ಬಾದಾಮಿ ಪೇಸ್ಟ್, ಗರಂ ಮಸಾಲಾ ಪುಡಿ, ಪೆಪ್ಪರ್ ಪೌಡರ್ ಮತ್ತು ಉಪ್ಪು ಸೇರಿಸಿ ಸ್ವಲ್ಪ ನೀರು ಸೇರಿಸಿ 2-3 ನಿಮಿಷಗಳ ಕಾಲ ಸಾಧಾರಣ ಉರಿಯಲ್ಲಿ ಬೇಯಿಸಿ.
ಈಗ ಮೊಸರು ಸೇರಿಸಿ, ಮೊಸರು ಪೂರ್ಣವಾಗಿ ಗ್ರೇವಿಯಲ್ಲಿ ಮಿಕ್ಸ್ ಆಗುವ ತನಕ ಬೇಯಿಸಿ . ನಂತರ 1/4 ಕಪ್ ಹಾಲು ಹಾಗೂ ತಾಜಾ ಕೆನೆಯನ್ನು ಸೇರಿಸಿ 3 ನಿಮಿಷಗಳ ಕಾಲ ಸಾಧಾರಣ ಉರಿಯಲ್ಲಿ ಬೇಯಿಸಿ. ಈಗ ಬೇಯಿಸಿದ ಮೊಟ್ಟೆಯನ್ನು ಗ್ರೇವಿಗೆ  ಹಾಕಿ ಮಿಕ್ಸ್ ಮಾಡಿ ಕೊನೆಯ 3 ನಿಮಿಷಗಳ ಅವಧಿಯಲ್ಲಿ ಮುಚ್ಚಳವನ್ನು ತೆಗೆದು ಗ್ರೇವಿ ದಪ್ಪವಾಗಲು ಬಿಡಿ. ಕೊನೆಯಲ್ಲಿ ಸಣ್ಣದಾಗಿ ಹೆಚ್ಚಿಟ್ಟ ಕೊತ್ತಂಬರಿ ಎಲೆಗಳನ್ನು ಬೆರೆಸಿ.                                                                                                                                                                                                                                      
Special Egg Gravy 
 INGREDIENTS:
 5 Boiled Eggs
2 tablespoons ghee + for drizzling
1/4 cup milk
4 Cloves
1 inch Cinnamon
3 Cardamom
1 Star Anise
2 medium onions, sliced
1tbsp. pepper powder
1tbsp.garam masala powder
1½ tablespoons ginger-garlic paste
Salt to taste
1½ tablespoons almond paste
3-4 green chillies, slit
½ teaspoon green cardamom powder
½ cup yogurt, whisked
1½ tablespoons fresh cream
To prepare Egg Khorma:
 
First boil the eggs and make sure that the eggs are hard boiled. Once the eggs are boiled peel off the Shell gently and keep them aside.

 
In another pan add 3 tbsp. ghee, once the ghee is hot add 1 Cinnamon Stick,4 Cloves,3 Cardamom ,1 Star Anise, then finely chopped onion, Once the onions are well cooked and on the verge of changing color. Add green chillies followed by Ginger Garlic Paste and sauté for 30 seconds. Now add Almond Paste, Garam masala powder, Peppar Powder & Salt Add little water so that it do not burn Give it a quick stir cook on medium heat for 2-3 minutes.
 
Now add yogurt and cook till the yogurt gets fully incorporated in the gravy. Add 1/4 cup fresh milk followed by the cream, cover and cook on medium heat for 3 minutes. Now you can add in the boiled Eggs give it a quick stir. Cover and cook for some time then partially remove the lid during the last 3 minutes or so to thicken the gravy now add finely chopped coriander leaves and give it stir. 
 
                                                                                                      
Thripthi Bhandary

Leave a Reply

Your email address will not be published. Required fields are marked *