January 18, 2025
kachuru-temple

ಭಂಡಾರಿ ಸಮಾಜ ಸೇವಾ ಸಂಘ, ಸಾಗರ

ಪ್ರಕಟಣೆ:

ನಮ್ಮ ಭಂಡಾರಿ ಸಮಾಜ ಸೇವಾ ಸಂಘದ ವತಿಯಿಂದ ಸಮಸ್ತ ಸಮಾಜ ಬಾಂಧವರಿಗೆ ತಿಳಿಯಪಡಿಸುವುದೇನೆಂದರೆ, ದಿನಾಂಕ 4-5-2018ರಿಂದ 9-5-2018 ರವರೆಗೆ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರು ಹನೆಹಳ್ಳಿ ಗ್ರಾಮ ಬಾರ್ಕೂರು ಉಡುಪಿ ಜಿಲ್ಲೆ. ಇಲ್ಲಿ ಅಷ್ಟಬಂಧ ಪೂರ್ವಕ ಬ್ರಹ್ಮಕಲಶೋತ್ಸವ ಹಾಗೂ ಷೋಡಷ ಪವಿತ್ರಾತ್ಮಕ ಸಂಪೂರ್ಣ ನಾಗಮಂಡಲ ವೈಭವೋತ್ಸವ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಹೋಗಿ ಭಾಗವಹಿಸುವ ಬಗ್ಗೆ ನಮ್ಮ ಸಂಘದ ವತಿಯಿಂದ ಬಸ್ ನ ವ್ಯವಸ್ಥೆ ಮಾಡುವ ಬಗ್ಗೆ ಉದ್ದೇಶಿಸಲಾಗಿರುತ್ತದೆ. ದಿನಾಂಕ 8-5-2018 ರಂದು ಬೆಳಗ್ಗೆ 6:30 ರಿಂದ 7:00 ಗಂಟೆ ಒಳಗೆ ಸಾಗರದ LIC ಆಪೀಸಿನ ಎದುರುಗಡೆ ಬಿ.ಹೆಚ್ ರಸ್ತೆಯಲ್ಲಿ ಬಸ್ಸು ಹೊರಡಲಿರುತ್ತದೆ. 
ದಿನಾಂಕ 9-5-2018 ರಂದು ವಾಪಾಸ್ಸು ಸಾಗರಕ್ಕೆ ಅದೇ ಬಸ್ಸಿನಲ್ಲಿ ಹೊರಡಲಾಗುವುದು. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಾಗವಹಿಸುವ ಸಮಾಜ ಬಾಂಧವರು ಈ ಕೆಳಕಂಡವರನ್ನು ತಕ್ಷಣ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಂಡು ತಮ್ಮ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಈ ಮೂಲಕ ವಿನಂತಿಸಲಾಗಿದೆ.
ಈಗ ಚುನಾವಣಾ ನೀತಿ ಸಂಹಿತೆ ಇದ್ದು ಯಾವುದೇ ಕರೆಯೋಲೆಗಳನ್ನು ಹಂಚಲು ಹಾಗೂ ಬ್ಯಾನರು, ಪ್ಲೆಕ್ಸ್ ಗಳನ್ನು ಅಳವಡಿಸಲು ಅನುಮತಿ ನೀಡದಿರುವ ಕಾರಣ ಬ್ಯಾನರು ಹಾಕಿರುವುದಿಲ್ಲ.
ಸಾಗರದ ಎಲ್ಲ ಸಮಾಜ ಬಾಂಧವರು ದೇಣಿಗೆ ಮತ್ತು ಹೊರೆ ಕಾಣಿಕೆ (ಹೂವು ,ಹಿಂಗಾರ ,ಬಾಳೆಎಲೆ ,ತರಕಾರಿ ಮತ್ತು ಇತರೆ ವಸ್ತುಗಳು)
ಹೊರೆಕಾಣಿಕೆಯನ್ನು ಸಾಗರದ ಮಾರಿಗುಡಿ ಹಿಂಬಾಗದಲ್ಲಿರುವ ಗೀತಾಗೋವಿಂದಪ್ಪ ಇವರ ಮನೆಗೆ ತಲುಪಿಸಬೇಕಾಗಿ ವಿನಂತಿಸುತ್ತೇವೆ. ಮೇ 5 ನೇ ತಾರೀಕು ಬೆಳಗ್ಗೆ 5 ಗಂಟೆಗೆ ಹೊರೆ ಕಾಣಿಕೆ ಹೊರಡಲಿದೆ. ಹೊರೆಕಾಣಿಕೆ , ದೇಣಿಗೆ ನೀಡುವವರು ಸಂಘದ ಪದಾಧಿಕಾರಿಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ                                                                                                                                                

-ಕೃಷ್ಣಮೂರ್ತಿ ಭಂಡಾರಿ, ಸಾಗರ 

ಅಧ್ಯಕ್ಷರು, ಭಂಡಾರಿ ಸಮಾಜ‌ಸಂಘ ಸಾಗರ. 

ರವಿ ಪ್ರಕಾಶ್ 

ಪ್ರಧಾನ ಕಾರ್ಯದರ್ಶಿ, ಭಂಡಾರಿ ಸಮಾಜ ಸಂಘ ಸಾಗರ.

ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ:

9945687856

9448767043

9663051009 ( WhatsApp)

Leave a Reply

Your email address will not be published. Required fields are marked *