January 18, 2025
Kacchuru sri nageshwara
ಪ್ರೀತಿಯ ಬಂಧುಗಳೇ, 
 
 
ದಿನಾಂಕ 29-06-2020 ಸೋಮವಾರ ನಮ್ಮ ಕುಲದೇವರಾದ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಬಾರ್ಕೂರಿನಲ್ಲಿ ಎಲ್ಲಾ ಭಂಡಾರಿ ಬಂಧುಗಳ ಪರವಾಗಿ ಮತ್ತು ಇಡೀ ಜಗತ್ತಿನ  ಜನತೆಯ ಪರವಾಗಿ ಶ್ರೀ ನಾಗೇಶ್ವರ  ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. 
 
ನಾವು ಮಾಡುವಂತಹ ಈ ವಿಶೇಷ ಪೂಜೆಯನ್ನು ಸ್ವೀಕರಿಸಿ ಈ ಮಹಾಮಾರಿ ಕೋರೋಣ ಆದಷ್ಟು ಬೇಗ ದೂರ ಮಾಡಬೇಕು ಮತ್ತು ನಮ್ಮೆಲ್ಲರನ್ನು ರಕ್ಷಿಸಬೇಕು ಎಂದು ನಾವು ದೇವರಲ್ಲಿ ವಿನಮ್ರತೆಯಿಂದ ಪ್ರಾರ್ಥಿಸೋಣ. 
ಪೂಜಾ ವಿಧಾನ ಬೆಳಿಗ್ಗೆ ಹತ್ತು ಗಂಟೆ ನಲವತ್ತೈದು ನಿಮಿಷಕ್ಕೆ ಶುರುವಾಗುತ್ತದೆ ಮಹಾಪೂಜೆ ಮಧ್ಯಾಹ್ನ ಹನ್ನೆರಡು ಗಂಟೆ ಇಪ್ಪತ್ತು ನಿಮಿಷಕ್ಕೆ ನಡೆಯಲಿದೆ .ಈ ಮಹಾ ಪೂಜೆಯ ಸಮಯದಲ್ಲಿ ನಾವು ನಮ್ಮ ನಮ್ಮ ಮನೆಯಲ್ಲಿ ನಮ್ಮ ದೇವರ ಎದುರು ನಿಂತು ಶ್ರೀ ಕಚ್ಚೂರು ನಾಗೇಶ್ವರ  ದೇವರನ್ನು ನಮ್ಮ ಕುಟುಂಬದ ದೈವಗಳನ್ನು  ನೆನೆದು ನಮ್ಮೆಲ್ಲರಿಗೂ ಬಂದಿರುವ ಕಷ್ಟವನ್ನು ದೂರ ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.                   ದೇವರನ್ನು ಮನಪೂರ್ವಕವಾಗಿ ಭಕ್ತಿಯಿಂದ ನೆನಪಿಸಿದರೆ ಆ ದೇವರು ಖಂಡಿತವಾಗಿಯೂ ನಮ್ಮೆಲ್ಲರ ಕಷ್ಟವನ್ನು ದೂರ ಮಾಡುತ್ತಾರೆ ಎನ್ನುವ ಭರವಸೆ  ನಮ್ಮೆಲ್ಲರಿಗೂ ಇದೆ.
 
 
ಎಲ್ಲ ಬಂಧುಗಳಲ್ಲಿ ವಿನಂತಿ ಈ ಪೂಜಾ ಸಮಯದಲ್ಲಿ ನೀವೆಲ್ಲರೂ ನಿಮ್ಮ ನಿಮ್ಮ ಮನೆಗಳಲ್ಲಿ ಕಚ್ಚೂರು ಶ್ರೀ ನಾಗೇಶ್ವರ  ದೇವರನ್ನು ದೈವಗಳನ್ನು ನೆನಪಿಸಿ  ನಿಮಗೆ ಗೊತ್ತಿರುವ ಜಪ ಮಂತ್ರಗಳನ್ನು ಮಾಡಿ ಪ್ರಾರ್ಥಿಸಬೇಕಾಗಿ  ಇನ್ನೊಂದು ಸಲ ಎಲ್ಲ ಬಂಧುಗಳಲ್ಲಿ ವಿನಂತಿಸುತ್ತೇವೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕೆಲವೊಂದು ನಮ್ಮ ಭಂಡಾರಿ ಬಂಧುಗಳಿಗೆ ಕೂಡ ಈ ಮಹಾಮಾರಿ ರೋಗ ತಗಲಿದೆ. ಈ ರೋಗದಿಂದ ಅವರು ಆದಷ್ಟು ಬೇಗ ಗುಣಮುಖರಾಗಿ ಹೊರ ಬರಲಿ ಎಂದು ವಿಶೇಷವಾಗಿ ಶ್ರೀ ಕಚ್ಚೂರು ನಾಗೇಶ್ವರ ದೇವರಲ್ಲಿ ವಿನಮ್ರತೆಯಿಂದ ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡೋಣ. 
 
ಈ ಮೆಸೇಜ್  ಎಲ್ಲರಿಗೂ ತಲುಪುವಂತೆ ನಮಗೆ ಸಹಕರಿಸಬೇಕಾಗಿ ವಿನಂತಿಸುತ್ತೇವೆ . ನಿಮಗೆಲ್ಲರಿಗೂ ಧನ್ಯವಾದಗಳು, 
 
 
ಅಧ್ಯಕ್ಷರು, ಸಮಿತಿ ಸದಸ್ಯರು ಮುಂಬಯಿ ಭಂಡಾರಿ ಸೇವಾ ಸಮಿತಿ ಪರವಾಗಿ,  ಕಚ್ಚೂರು ದೇವಸ್ಥಾನ ಇದರ ಆಡಳಿತದ ಪರವಾಗಿ
ಭಂಡಾರಿ ಸಮಾಜದ ಸರ್ವ ಸದಸ್ಯರ ಪರವಾಗಿ.
 
 
 
 
 

Leave a Reply

Your email address will not be published. Required fields are marked *