ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಇಂದಿರಾನಗರ ಬಡಾವಣೆಯಲ್ಲಿ ಶ್ರೀ ಶ್ರೀನಿವಾಸ್ ಭಂಡಾರಿ ಮತ್ತು ಶ್ರೀಮತಿ ಶಾಂತ ಶ್ರೀನಿವಾಸ್ ಭಂಡಾರಿ ದಂಪತಿಯು ನೂತನವಾಗಿ ನಿರ್ಮಿಸಿದ ತಮ್ಮ ಮನೆ…
“ಮಾತೃ ಮಂದಿರ”
ದ ಗೃಹಪ್ರವೇಶವನ್ನು ಅಕ್ಟೋಬರ್ 15 ರ ಸೋಮವಾರ ಸಂಜೆ 7 ಗಂಟೆಗೆ ವಾಸ್ತುಪೂಜೆ ಮಾಡುವುದರೊಂದಿಗೆ ಆರಂಭಿಸಿ, ಅಕ್ಟೋಬರ್ 16 ರ ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಶ್ರೀ ಲಕ್ಷ್ಮೀ ಸಹಿತ ಶ್ರೀ ಸತ್ಯ ನಾರಾಯಣ ಪೂಜೆಯನ್ನು ಮಾಡುವುದರೊಂದಿಗೆ ನೆರವೇರಿಸಿದರು.
ಗೃಹಪ್ರವೇಶದ ಅಮೃತಘಳಿಗೆಯಲ್ಲಿ ಉಪಸ್ಥಿತರಿದ್ದ ಬಂಧುಗಳು, ಕುಟುಂಬ ವರ್ಗದವರು, ಆತ್ಮೀಯರು, ಹಿತೈಷಿಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸವಿ ಭೋಜನ ಸ್ವೀಕರಿಸಿದರು. ಅತಿಥಿಗಳು ಯಥೋಚಿತ ಸತ್ಕಾರ ಸ್ವೀಕರಿಸಿ ಶ್ರೀನಿವಾಸ್ ಭಂಡಾರಿ ಮತ್ತು ಶಾಂತ ದಂಪತಿಯನ್ನು ಮತ್ತು ಮಕ್ಕಳಾದ ಸುಪ್ರೀತ್ ಭಂಡಾರಿ ಹಾಗೂ ಸುಷ್ಮಿತಾ ಭಂಡಾರಿಯವರನ್ನು ಹರಸಿ ಹಾರೈಸಿದರು. ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಉಡುಪಿ, ಮಂಗಳೂರು, ಮುಂಬಯಿ, ಕೊಪ್ಪ ಭಂಡಾರಿ ಬಂಧುಗಳು ಶುಭ ಹಾರೈಸಿದರು.
ಗೃಹಪ್ರವೇಶದ ಸಂಭ್ರಮದಲ್ಲಿರುವ ದಂಪತಿಯನ್ನು ಮತ್ತು ಮಕ್ಕಳನ್ನು ಶ್ರೀ ದೇವರು ಆಯುರಾರೋಗ್ಯವನ್ನು ನೀಡಿ ಆಶೀರ್ವದಿಸಲಿ.ನೂತನ ಮನೆಯು ಅವರಿಗೆ ಸುಖ ಶಾಂತಿ ನೆಮ್ಮದಿಯನ್ನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.