
ಬೆಂಗಳೂರಿನ ಶ್ರೀ ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ (ರಿ) ನವರು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಗಣನೀಯ ಸಾಧನೆ ಮಾಡಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ “ಕರ್ನಾಟಕ ಕಲಾಶ್ರೀ” ರಾಜ್ಯ ಪ್ರಶಸ್ತಿಯನ್ನು ಈ ಬಾರಿ ಮುಂಬಯಿಯ ಮಾಸ್ಟರ್ ಆದಿ ಯಶವಂತ್ ಭಂಡಾರಿ ಗಳಿಸಿದ್ದಾರೆ.
ನವೆಂಬರ್ 11,2018 ರ ಭಾನುವಾರ ಉಡುಪಿಯ ರಾಜಾಂಗಣ ಸಭಾಂಗಣದಲ್ಲಿ ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿ ಮತ್ತು ಮುಂಬಯಿಯ ರಾಧಾಕೃಷ್ಣ ನೃತ್ಯ ಅಕಾಡೆಮಿಯವರು ಜಂಟಿಯಾಗಿ ಆಯೋಜಿಸಿದ್ದ ಭವ್ಯ ಸಮಾರಂಭದಲ್ಲಿ ಉಡುಪಿಯ ಪಲಿಮಾರು ಮಠದ ಪರ್ಯಾಯ ಶ್ರೀ ಗಳಾದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮಾಸ್ಟರ್ ಆದಿ ಯಶವಂತ್ ಭಂಡಾರಿಯವರಿಗೆ “ಕರ್ನಾಟಕ ಕಲಾಶ್ರೀ” ರಾಜ್ಯ ಪ್ರಶಸ್ತಿಯನ್ನು ದಯಪಾಲಿಸಿದರು. ಆದಿ ಮುಂಬಯಿಯ ಭ್ರಾಮರಿ ಯಕ್ಷ ನೃತ್ಯ ಕಲಾನಿಲಯದ ವಿದ್ಯಾರ್ಥಿ.
ಆದಿ ಮಹಾರಾಷ್ಟ್ರದ ನಲ್ಲಸೋಪರ ಈಸ್ಟ್ ಸಂತ ಅಲೋಶಿಯಸ್ ಪ್ರೌಢಶಾಲೆ(ಸಂತ ಕ್ಸೇವಿಯರ್ಸ್ ಗ್ರೂಪ್ ಅಫ್ ಸ್ಕೂಲ್) ಯಲ್ಲಿ ಆರನೇ ತರಗತಿ ವಿದ್ಯಾರ್ಥಿಯಾಗಿದ್ದಾರೆ. ಇವರು ಮೂಲತಃ ಮುಲ್ಕಿಯವರಾದ, ಪ್ರಸ್ತುತ ನಲ್ಲಸೋಪರ ಈಸ್ಟ್ ನಲ್ಲಿ ನೆಲೆಸಿರುವ ಯಶವಂತ ಎಂ.ಭಂಡಾರಿ ಹಾಗು ಚಿತ್ರಕಲಾ ವೈ.ಭಂಡಾರಿ ದಂಪತಿಯ ಪುತ್ರ.
ಆದಿ ತನ್ನ ಏಳನೇ ವಯಸ್ಸಿನಲ್ಲೇ ಕರಾಟೆ ಕಲಿಯಲಾರಂಭಿಸಿ ಈಗಾಗಲೇ ಕರಾಟೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾನೆ. ಆದಿ ಯಶವಂತ್ ಭಂಡಾರಿ ಜೀವನದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ,ಇನ್ನಷ್ಟು ಪ್ರಶಸ್ತಿ ಸನ್ಮಾನಗಳನ್ನು ಪಡೆದು ಹೆತ್ತವರಿಗೆ ಗೌರವವನ್ನು, ಭಂಡಾರಿ ಸಮಾಜಕ್ಕೆ ಕೀರ್ತಿಯನ್ನು ತಂದುಕೊಡಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಮನಃಪೂರ್ವಕವಾಗಿ ಶುಭ ಹಾರೈಸುತ್ತದೆ.
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.