November 22, 2024
1

Stretch Marks: ಹೆರಿಗೆಯ ಬಳಿಕ ಸ್ಟ್ರೆಚ್​ ಮಾರ್ಕ್ಸ್​​ ಹೋಗಲಾಡಿಸಲು ಈ ಮನೆಮದ್ದು ಟ್ರೈ ಮಾಡಿ!

ಹೆರಿಗೆಯ ಬಳಿಕ ಹೊಟ್ಟೆಯ ಮೇಲೆ ಹಾಗೆಯೇ ಉಳಿದುಕೊಳ್ಳುವ ಸ್ಟ್ರೆಚ್​ ಮಾರ್ಕ್ಸ್​ ಕೆಲವರಿಗೆ ಮುಜುಗರ ಉಂಟು ಮಾಡಿಸಬಹುದು. ಆದರೆ ಅದಕ್ಕೆ ಚಿಂತೆ ಬೇಡ. ಇಂದು ನಾವು ಹೇಳುವ ಮನೆ ಮದ್ದುಗಳ ಮೂಲಕ ಸ್ಟ್ರೆಚ್​ ಮಾರ್ಕ್ಸ್​​ಗಳನ್ನು ಸುಲಭವಾಗಿ ಹೋಗಲಾಡಿಸಬಹುದು.

ಹೆರಿಗೆಯ ಬಳಿಕ ಹೊಟ್ಟೆಯ ಮೇಲೆ ಹಾಗೆಯೇ ಉಳಿದುಕೊಳ್ಳುವ ಸ್ಟ್ರೆಚ್​ ಮಾರ್ಕ್ಸ್​ ಕೆಲವರಿಗೆ ಮುಜುಗರ ಉಂಟು ಮಾಡಿಸಬಹುದು. ಆದರೆ ಅದಕ್ಕೆ ಚಿಂತೆ ಬೇಡ. ಇಂದು ನಾವು ಹೇಳುವ ಮನೆ ಮದ್ದುಗಳ ಮೂಲಕ ಸ್ಟ್ರೆಚ್​ ಮಾರ್ಕ್ಸ್​​ಗಳನ್ನು ಸುಲಭವಾಗಿ ಹೋಗಲಾಡಿಸಬಹುದು.

ಮಗು ಹುಟ್ಟಿದ ಬಳಿಕ ತಾಯಿಯ ಖುಷಿಗೆ ಪಾರವೇ ಇರುವುದಿಲ್ಲ. 9 ತಿಂಗಳು ಹೆತ್ತು ಹೊತ್ತು ಸಾಕಿದ ಮಗುವಿನ ಮುಖ ನೋಡಿ ತನ್ನ ನೋವೆಲ್ಲವನ್ನೂ ಮರೆಯುತ್ತಾಳೆ. ಆದರೂ ಸಹ ಹೆರಿಗೆಯ ಬಳಿಕ ಸ್ವಲ್ಪ ತಿಂಗಳವರೆಗೆ ತಾಯಿಗೆ ನೋವು ಇರುತ್ತದೆ.

ಸ್ಟ್ರೆಚ್​ ಮಾರ್ಕ್ಸ್​​ಗಳು ಪ್ರಸವಾನಂತರದ ಕೆಲವು ಬದಲಾವಣೆಗಳಲ್ಲಿ ಒಂದಾಗಿದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರ ತೂಕ ಹೆಚ್ಚಾಗಿರುತ್ತದೆ. ಹೆರಿಗೆಯ ಬಳಿಕ ತಾಯಿಯು ತೂಕ ಕಳೆದುಕೊಳ್ಳುತ್ತಾಳೆ. ಗರ್ಭಿಣಿಯಾಗಿದ್ದಾಗ ಹೊಟ್ಟೆ ಹಿಗ್ಗುವುದರಿಂದ ಸ್ಟ್ರೆಚ್​ ಮಾರ್ಕ್ಸ್​ಗಳು ಕಾಣಿಸಿಕೊಳ್ಳುತ್ತವೆ. ಮಗು ಹುಟ್ಟಿದ ಬಳಿಕ ಆ ಕಲೆಗಳು ಹಾಗೆಯೇ ಇರುತ್ತವೆ.

ಈ ಕಲೆಗಳನ್ನು ಹೋಗಲಾಡಿಸಲು ಮನೆಯಲ್ಲಿ ಕೆಲವು ಮದ್ದುಗಳಿವೆ. ಈ ಮನೆ ಮದ್ದು ಟ್ರೈ ಮಾಡಿದರೆ ನಿಮ್ಮ ಹೊಟ್ಟೆಯ ಮೇಲಿನ ಚರ್ಮವು ಮೊದಲಿನಂತೆ ಮೃದು ಹಾಗೂ ಸ್ಟ್ರೆಚ್​ ಮಾರ್ಕ್ಸ್​​ ರಹಿತವಾಗಿ ಕಾಣುತ್ತದೆ. ಅಲೋವೆರಾ ಚರ್ಮದ ಅಂಗಾಂಶವನ್ನು ಮತ್ತೆ ಉತ್ಪಾದಿಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ನೈಸರ್ಗಿಕ ಗುಣಪಡಿಸುವ ಗುಣವನ್ನು ಹೊಂದಿದೆ. ಹೀಗಾಗಿ ನೀವು ಅಲೋವೆರಾ ಜೆಲ್​ನ್ನು ಸ್ಟ್ರೆಚ್​ ಮಾರ್ಕ್​ ಇರುವ ಜಾಗಕ್ಕೆ ಹಚ್ಚಿ. ಅರ್ಧ ಗಂಟೆಯ ಬಳಿಕ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ. ಪ್ರತಿದಿನ ಹೀಗೆ ಮಾಡಿದರೆ, ಕ್ರಮೇಣ ಸ್ಟ್ರೆಚ್​ ಮಾರ್ಕ್​ ಮಾಯವಾಗುತ್ತದೆ.

ಮತ್ತೊಂದು ಮನೆ ಮದ್ದು ಏನೆಂದರೆ, ತೆಂಗಿನ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಕ್ಸ್​​ ಮಾಡಿ. ಬಳಿಕ ಸ್ಟ್ರೆಚ್​ ಮಾರ್ಕ್​ ಇರುವ ಜಾಗಕ್ಕೆ ಹಚ್ಚಿ. ನಿಧಾನವಾಗಿ ಮಸಾಜ್ ಕೂಡ ಮಾಡಿ. ಪ್ರತಿದಿನ ಈ ಮಿಶ್ರಣವನ್ನು ಹಚ್ಚುತ್ತಾ ಬಂದರೆ ಸ್ಟ್ರೆಚ್​ ಮಾರ್ಕ್​​ ಹೋಗುವುದರಲ್ಲಿ ಅನುಮಾನವೇ ಇಲ್ಲ.

ಸರಿಯಾದ ಪೋಷಣೆ ಹಾಗೂ ತೇವಾಂಶವೂ ಸಹ ಸ್ಟ್ರೆಚ್​ ಮಾರ್ಕ್​ನ್ನು ತೊಡೆದುಹಾಕಲು ಇರುವ ಮಾರ್ಗಗಳಾಗಿವೆ. ಪ್ರತಿದಿನ ನೀವು ಕ್ಯಾಸ್ಟರ್ ಆಯಿಲ್​ ಅನ್ನು ಸ್ಟ್ರೆಚ್​ ಮಾರ್ಕ್​ ಇರುವ ಜಾಗಕ್ಕೆ ಹಚ್ಚುತ್ತಾ ಬನ್ನಿ. ಇದು ಚರ್ಮದ ಮೇಲಿನ ಕಲೆಗಳನ್ನು ಹೋಗಲಾಡಿಸುತ್ತದೆ.

ನಿಂಬೆ ರಸ ಸ್ಟ್ರೆಚ್ ಮಾರ್ಕ್ಸ್​ ಹೋಗಲಾಡಿಸಲು ಇರುವ ಮತ್ತೊಂದು ಮನೆ ಮದ್ದಾಗಿದೆ. ಇದರಲ್ಲಿನ ನೈಸರ್ಗಿಕ ಆಮ್ಲೀಯತೆಯು ಚರ್ಮದ ಕಂಡೀಷನರ್​ ಆಗಿ ಕಾರ್ಯ ನಿರ್ವಹಿಸುತ್ತದೆ. ಇದರ ಜೊತೆಗೆ ಸೌತೆಕಾಯಿ ರಸವನ್ನು ಮಿಕ್ಸ್​ ಮಾಡಿ. ಹೊಟ್ಟೆಯ ಭಾಗಕ್ಕೆ ನಿಂಬೆ ರಸ ಮತ್ತು ಸೌತೆಕಾಯಿ ರಸ ಎರಡನ್ನೂ ಮಿಕ್ಸ್​ ಮಾಡಿ ಹಚ್ಚಿ. 20 ನಿಮಿಷ ಬಿಟ್ಟು ತೊಳೆಯಿರಿ.

ರಾತ್ರಿ ಮಲಗುವಾಗ ಕೋಕೋ ಬೆಣ್ಣೆಯಿಂದ ಹೊಟ್ಟೆಯನ್ನು ಮಸಾಜ್ ಮಾಡುವುದರಿಂದ ಸ್ಟ್ರೆಚ್ ಮಾರ್ಕ್ಸ್​ ಕಡಿಮೆಯಾಗುತ್ತವೆ. (ಗಮನಿಸಿ: ಈ ಲೇಖನದಲ್ಲಿ ನೀಡಲಾದ ಸಲಹೆಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ.)

 

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: 18

 

Leave a Reply

Your email address will not be published. Required fields are marked *