
ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಉಪಾಧ್ಯಕ್ಷ ಶ್ರೀ ಮೋಹನ್ ಭಂಡಾರಿ ಮತ್ತು ಶ್ರೀಮತಿ ರಮಾ ಮೋಹನ್ ಭಂಡಾರಿ ಬಾಳೆಹೊನ್ನೂರು ದಂಪತಿಯ ದ್ವಿತೀಯ ಪುತ್ರ

ಚಿ । ಸುದೇಶ್ ಚಂದ್ರ ಎಂ
ಬೆಂಗಳೂರಿನ ಶ್ರೀಮತಿ ಮುಕ್ತಾ ಮನೋಹರ್ ಕಿಣಿ
ಮತ್ತು ಶ್ರೀ ಮನೋಹರ್ ಕಿಣಿ ದಂಪತಿಯ ದ್ವಿತೀಯ ಪುತ್ರಿ
ಚಿ| ಸೌ| ದಿವ್ಯ ಕಿಣಿ

ಇವರ ವಿವಾಹವು ಏಪ್ರಿಲ್ 28, ,2019 ರ ಭಾನುವಾರ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ಬಳಿ ಇರುವ ಪೈ ವಿಸ್ತಾ ಕನ್ವೆನ್ಷನ್ ಹಾಲ್ ನಲ್ಲಿ ಬಂಧುಮಿತ್ರರು, ಕುಟುಂಬಸ್ಥರು, ಹಿತೈಷಿಗಳು ಹಾಗೂ ಸಹೋದ್ಯೋಗಿಗಳ ಶುಭ ಆಶೀರ್ವಾದೊಂದಿಗೆ ಬಹಳ ವಿಜೃಂಭಣೆಯಿಂದ ನೆರವೇರಿತು.

ಈ ಸಂದರ್ಭದಲ್ಲಿ ಭಂಡಾರಿ ಸಂಘ ಬೆಂಗಳೂರು ವಲಯದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ,ಸಮಾಜದ ಹಲವು ಹಿರಿಯರು ಪಾಲ್ಗೊಂಡಿದ್ದರು

ನವ ದಂಪತಿಗಳಿಗೆ ಭಗವಂತನು ಪ್ರೀತಿ, ವಿಶ್ವಾಸ , ಸುಖ, ಶಾಂತಿ, ನೆಮ್ಮದಿಯ ಬದುಕನ್ನು ಕಲ್ಪಿಸಿ ಆರೋಗ್ಯ ಆಯುಷ್ಯ ಸಕಲ ಐಶ್ವರ್ಯವನ್ನು ಕರುಣಿಸಿ ಚಿರಕಾಲ ಅನೂನ್ಯತೆಯಿಂದ ಬಾಳಿ ಬದುಕಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಯು ಹಾರ್ದಿಕವಾಗಿ ಶುಭ ಹಾರೈಸುತ್ತದೆ.
-ಭಂಡಾರಿವಾರ್ತೆ