
ಸುಧಾಕರ ಬನ್ನಂಜೆ….ಈ ಹೆಸರು ತುಳುನಾಡಿನಲ್ಲಿ ಹೇಗೆ ಚಿರಪರಿಚಿತವೋ ಹಾಗೆಯೇ ರಾಜ್ಯದಲ್ಲಿಯೂ ಹೆಸರುವಾಸಿ. ಇದಕ್ಕೆ ಕಾರಣ ಇವರ ಕಲಾ ಸೇವೆ . ವಿದ್ವತ್ , ಚಿಂತನ ಶೀಲ ಮನಸ್ಸು,ಮಾನವೀಯ ಮೌಲ್ಯಗಳ ಬಗ್ಗೆ ಅವಿರತ ಹೋರಾಟ ಮನೋಭಾವ, ಇವರ ಅಪಾರ ತಿಳುವಳಿಕೆಯಿಂದ ಸಮಾಜದ ಎಲ್ಲಾ ವರ್ಗಗಳಿಂದಲೂ ಅಪಾರ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ಸುಧಾಕರ ಬನ್ನಂಜೆ ನಮ್ಮಸಮಾಜದವರು ಎನ್ನಲು ನಿಜಕ್ಕೂ ಹೆಮ್ಮೆಯಾಗುತ್ತಿದೆ.ಇವರಿಗೆ ಹೊಟ್ಟೆಯ ಹಸಿವಿಗಿಂತ ಜ್ಞಾನದ ಹಸಿವು ಹೆಚ್ಚು. ಮಾನವೀಯತೆ ಕಾಳಜಿ ಹೆಚ್ಚು.ಹಾಗಾಗಿ ಲಕ್ಷ್ಮೀ ಕಟಾಕ್ಷ ಇವರಿಗೆ ಹೆಚ್ಚು ಒಲಿಯಲಿಲ್ಲ.ಆದರೆ ಸರಸ್ವತಿಯ ಆಶೀರ್ವಾದ ಇವರ ಮೇಲಿದೆ .ಇವರ ನೇರ ನಡೆ ನುಡಿ ಇವರಿಗೆ ತೊಡಕಾದದ್ದೂ ಇದೆ.
ವೇದ, ಉಪನಿಷತ್ತು, ಪುರಾಣಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ಬೈಬಲ್, ಕುರಾನ್, ಜೈನ, ಬೌದ್ದ, ಸಿಖ್ ಗ್ರಂಥಗಳನ್ನು ಓದಿ ಆಪಾರ ಜ್ಞಾನವನ್ನು ಪಡೆದುಕೊಂಡಿದ್ದಾರೆ. ವ್ಯಕ್ತಿಯ ಜೀವನದಲ್ಲಿ ತಂದೆ ತಾಯಿಯೇ ನಿಜವಾದ ದೇವರು ಎಂಬ ಅಚಲವಾದ ನಂಬಿಕೆ ಇರುವವರು ಸುಧಾಕರ ಬನ್ನಂಜೆ .
ಮಾನವೀಯತೆಗಿಂತ ಮಿಗಿಲಾದ ಧರ್ಮ ಬೇರೋಂದಿಲ್ಲ ಎನ್ನುವ ಇವರಿಗೆ ಹಿತಶತ್ರು ಗಳು ಇಲ್ಲವೆಂದಿಲ್ಲ, ಸಣ್ಣ ಸಮಾಜಗಳು ಸಂಘಟಿತರಾಗಬೇಕು.ಪಟ್ಟ ಭದ್ರ ಹಿತಾಸಕ್ತಿಗಳ ಎದುರು ತಲೆ ಎತ್ತಿ ಬದುಕಬೇಕು.ಊಳಿಗಮಾನ್ಯ ಪದ್ದತಿಗೆ ತಿಲಾಂಜಲಿ ನೀಡಬೇಕೆಂಬ ತುಡಿತ ಇವರದ್ದು.
ಸುಧಾಕರ ಬನ್ನಂಜೆಯವರು ಸಮಾಜದ ಹಲವಾರು ಉದಯೋನ್ಮುಖ ಪ್ರತಿಭೆಗಳಿಗೆ ತನ್ನ ಚಲನಚಿತ್ರದಲ್ಲಿ ಪ್ರಥಮವಾಗಿ ನಟಿಸಲು ಅವಕಾಶ ನೀಡಿರುವುದು ಸಮಾಜದ ಮೇಲೆ ಅವರಿಗಿರುವ ಪ್ರೀತಿಯನ್ನು ತೋರಿಸುತ್ತದೆ.
ಮೂಲ್ಕಿ ತಿರುಮಲೆಗುತ್ತು ದಿವಂಗತ ಸುಶೀಲಾ ಬನ್ನಂಜೆ ಮತ್ತು ದಿವಂಗತ ಅಚ್ಚಣ್ಣ ಭಂಡಾರಿಯವರ ಮಗನಾದ ಸುಧಾಕರ ಬನ್ನಂಜೆ ವೃತ್ತಿಯಲ್ಲಿ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಸಾಹಿತಿ ,ನಟ, ನಾಟಕಕಾರ, ,ಪತ್ರಕರ್ತರಾಗಿದ್ದು ಪತ್ನಿ ಮಮತಾ ಎಸ್ ಬನ್ನಂಜೆ ಮತ್ತುಮಕ್ಕಳು; ಪ್ರಾರ್ಥನ್ ಎಸ್ ಬನ್ನಂಜೆ, ಪ್ರೇರಣ್ ಎಸ್ ಬನ್ನಂಜೆಯ ಜೊತೆಗೆ ಬೆಂಗಳೂರಿನ ಗಾಯತ್ರಿ ನಗರದಲ್ಲಿ ವಾಸವಿದ್ದಾರೆ.
ಇವರು ನಿರ್ದೇಶನ ಮಾಡಿದ ಚಿತ್ರ ಗಳು: ಹೀಗೊಂದು ಪ್ರೇಮಕತೆ ( 1988 – ನಾಯಕ ನಟ ,ನಿರ್ಮಾಪಕ ,ಸಾಹಿತಿ) ಧರ್ಮಯೋಧರು ( 2003- ನಾಯಕ ನಟ,ಸಾಹಿತಿ)
ದೇವೆರ್ ( ತುಳು.2010- ಪೋಷಕ ನಟ,ಸಾಹಿತಿ) ನಾನು ಹೇಮಂತ್ ಅವಳು ಸೇವಂತಿ ( 2014- ನಿರ್ಮಾಪಕ, ಸಾಹಿತಿ, ಪೋಷಕ ನಟ)
ಪ್ರೇರಣೆ ( 2015- ನಿರ್ಮಾಪಕ, ಸಾಹಿತಿ ,ಪೋಷಕ ನಟ) ರಣರಣಕ ( 2017- ಸಾಹಿತಿ.ನಟ ) ನಟಿಸಿದ ಇತರ ಚಿತ್ರ ಗಳು: ಇಂದ್ರ ಧನುಷ್ (2000) ಬದಿ(2011) ಪೊನ್ನಮ್ಮ ( 2013) ಶಾಲೆ ( 2013) ಯಕ್ಷ( 2013)ಒಲವಿನ ಪಯಣ (2024),ಶಾನುಭೋಗರ ಮಗಳು ( 2014) ಅನಾಸಿನ್ ( 2015) ಪಾಠಶಾಲೆ ( 2015)
ಸಂಭಾಷಣೆ ಹಾಡು ಬರೆದ ಚಿತ್ರ ಗಳು:
ತುಡರ್ ( ತುಳು. 1998 ) ಐದೊಂದ್ಲ ಐದು ( 2010) ಬದಿ( ತುಳು. 2011) ಪೊನ್ನಮ್ಮ( ಕೊಡವ.2012) ಕೋಟಿ ಚೆನ್ನಯ ( ತುಳು- 2012) ಕಾಜಾರ್ ( ಕೊಂಕಣಿ -2013) ಶಾಲೆ( 2014) ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ( ತುಳು- 2016) ಜನ್ಮನಕ್ಷತ್ರ( 2017) ಎಂಕ್ಲ್ ಗ್ ಬದ್ಕೆರೆ ಬುಡ್ಲೆ (2017)
ಧಾರಾವಾಹಿಗಳು:
ದೂರದರ್ಶನ ದಲ್ಲಿ “ನಾಗರೀಕ”,ನೀ ಮುಡಿದ ಮಲ್ಲಿಗೆ,ಭಾವನಾ ,ಗುರುದೇವೋಭವ ನಿರ್ದೇಶನ, ಈ ಟಿವಿ “ಮನಸು” ಕಿರುಚಿತ್ರ ನಿರ್ದೇಶನ, ಉದಯ ಟಿವಿ ಮೇಕಿಂಗ್ ಆಫ್ ಕೇರಾಫ್ ಪುಟ್ಪಾತ್ ನಿರ್ದೆಶನ, ಝೀ ಟಿವಿ. ಮದುವೆ ಧಾರಾವಾಹಿ ನಿರ್ದೇಶನ,ಸುವರ್ಣ ಟಿವಿ .ಪುಣಾಣಿ ಪವರ್,ಗೊತ್ತಾನಗ ಪೊರ್ತಾಂಡ್ ಧಾರಾವಾಹಿ ನಿರ್ದೇಶನ, ಕಸ್ತೂರಿ ಟಿವಿ.ಕಂಜುಸ್ ಕಮಂಗಿರಾಯ ಧಾರಾವಾಹಿ ನಿರ್ದೇಶನ
ಇತರ:
ನಾಟಕ ರಚನೆ
64 – ತುಳುನಾಟಕಗಳು:- ಭೂಲೋಕೊಡು ನಾರದೆ,ತುಳಸಿ. ದಲ್ಲಾಳಿ ಶೀನಣ್ಣೆ,ನಾಗಬನ, ಮಿತ್ತ್ ದೆರ್ಪಿ,ಅಪ್ಪೆ ದಾಂತಿ ಜೋಕ್ಲು, ಕೆಂಪು ನೆತ್ತೆರ್,ಕಿಲಕಿಲ ಕೃಷ್ಣೆ
ಬದ್ಕುನ ಸಾದಿ.ಬಾಲೆ ಸರಪೆ,ಪೊಸ ಸಂಕ,ಬೀಡಿದ ಬ್ರಾಂಚ್,ಕೊದಿನ ನೆತ್ತೆರ್, ಎನ್ನ ಮೆಗ್ಯೆ, ಬಂಗಾರ್ದ ಬಿಸತ್ತಿ ಬೊಲ್ಲ ,ಒಂಜಪ್ಪೆ ಜೋಕುಲು,ಅಜ್ಜಿನ ಪುಲ್ಲಿ,ಕಾಣಿಕೆ ಡಬ್ಬ,ಪಿಂಗಾರ,ನ್ಯಾಷನಲ್ ಹೈವೇ ಪದಿನೇಲ್,ಆಟದ ಅಣ್ಣಪ್ಪೆ,ನಂದಾದೀಪ, ಕಿತ್ತೂರ್ದ ಚೆನ್ನಮ್ಮ,ಕೊದಿನ ನೆತ್ತೆರ್,ತುದೆಬದಿ,ಅಣ್ಣಯ್ಯ ಮಾಸ್ಟ್ರು ಕರಿಮಣಿಸರ,ಕಾಲಚಕ್ರ,ತುಳು ರಾನಿ ಅಬ್ಬಕ್ಕ,ಮಾಮು ಮಗಲ್ ಮಾಲತಿ, ಯಶೋದಾ,ಬೆರಿಬುಡಯೆ ಕೋರ್ದಟ್ಟ,ಮಾಮಿ,ತಿರ್ಮಲೆ ಗುತ್ತು,ಕೂಡಿನ ಇಲ್ಲ್,,ನೆರೆಲ್ ದಾಂತಿ ಮರ,ಕಂಬುಲ, ಸತ್ಯದ ಸಾದಿ,ಶೇಕುನ ಸೋಕು,ಮಾಜಂದಿ ಕುಂಕುಮ, ಶಿವಭಕ್ತೆ ಕಣ್ಣಪ್ಪೆ,ಕಲ್ಜಿಗದ ಸಾವಿತ್ರಿ, ಪುಣ್ಣಿಮೆ ಚಂದ್ರೆ, ದೇವೆರ್ ಓಲು ಉಲ್ಲೆರ್,ಮೋಕೆದ ಮರ್ಲ್ ,ಶಾಂತಿ, ಕೋಲ,ಗುರ್ಕಾರೆ,ಎಬಿಸಿ ಬ್ಯಾಂಕ್, ಒಪ್ಪ ಪುಟಿನಾಲ್,ತಪ್ಪು ಕಾಣಿಕೆ, ಕಾಲ ಕರಿಂಡ್ ,ತಾಳ ತತ್ತ್ಂಡ್,ಎಣ್ಣೆದಾಂತಿ ತುಡರ್,ಪಾಲ್,ಒಂತೆ ಉಂತುಲೆ,ಉಡಲ್ ಉರಿಂಡ್,ಜಾಲ್,ಅಮ್ಮೆರೆ ಗಂಟ್,ಎನ್ನ ತಮ್ಮಲೆ ಕಡಲಪ್ಪೆ ಬಾಲೆಲು,ಎಂಕ್ ಮದಿಮೆ ಆವೊಡು.
28 – ಕನ್ನಡ ನಾಟಕ:-
ಪ್ರಕೃತಿ, ಕಾಮರೂಪಿ, ಅಮರ್ ಅಶೋಕ್, ಮಾವನ ಮಗಳು, ಯಾರು ಹೊಣೆ,ಭಾವನಾ,ಪೋಲಿಸ್ ಪಾಪಮ್ಮ,ಸಿರಿದೇವಿ ,ಮದುಮಗ,ಕಲಿ ಭಗತ್ ಸಿಂಗ್,ಗೌಡರ ಅಳಿಯ,ಬಿರುಕು ಗೋಡೆ ನಾನೇನು,ಅಧ್ಯಾಹಾರ,ಒಂದು ಹೆಣ್ಣಿಗೆ ಒಂದೇ ಗಂಡೇ,ಚಂಚಲೆ,ವಸಂತಮಾಸ,ಅಪ್ಪನ ಗಂಟು,ಸಂಸಾರ,ಚಿತ್ತಾರ, ಧರ್ಮ ಸಂಗ್ರಾಮ,ನತದೃಷ್ಟ ಕರ್ಣ,,ಉಲ್ಲಾಳ ರಾಣಿ ಅಬ್ಬಕ್ಕ,,ಬೇಡರ ಕಣ್ಣಪ್ಪ,,ನ್ಯಾಯ ತೀರ್ಮಾನ,ನಾಗರಪಂಚಮಿ, ಶುಭಮಿಲನ,ಕಾನನದ ಮಲ್ಲಿಗೆ. ಈ ಎಲ್ಲಾ ನಾಟಕಗಳ ನಿರ್ದೇಶನ ಸಾವಿರಕ್ಕೂ ಮಿಕ್ಕಿ ಪ್ರಯೋಗ ಮತ್ತು ನಟನೆ.
ಯಕ್ಷಗಾನ ಕಲಾವಿದ.ಹಲವಾರು ಮೇಳಗಳಲ್ಲಿ ಅತಿಥಿ ಕಲಾವಿದನಾಗಿ ಆಗಿ ನೂರಾರು ಪ್ರದರ್ಶನ.
ಪತ್ರಿಕಾ ರಂಗ:- ಮುಂಗಾರು ದೈನಿಕದಲ್ಲಿ ಪುರವಣಿ ಸಂಪಾದಕ (1984), ಬಯಲು( ಸಾಪ್ತಾಹಿಕ. ಸಂಪಾದಕ- 1982), ಅಭಯವಾಣಿ ( ಸಾಪ್ತಾಹಿಕ .ಸಂಪಾದಕ- 1978)
ಜನವಾಣಿ (ಸಂಜೆ ಪತ್ರಿಕೆ ಸಹ ಸಂಪಾದಕ – 1978), ಈ ವಾರ ( ವರದಿಗಾರ- 1988).
ಬೆಂಗಳೂರು ಭಂಡಾರಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ,ಅಧ್ಯಕ್ಷರಾಗಿ,ಕಚ್ಚೂರು ನಾಗೇಶ್ಚರ ದೇವಾಲಯದ ವಾರ್ಷಿಕ ಉತ್ಸವ ಸಮಿತಿಯ ಕಾರ್ಯದರ್ಶಿ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಈ ಸಮಾಜದ ಪ್ರಥಮ ಸಿನಿಮಾ ನಿರ್ಮಾಪಕ ನಿರ್ದೇಶಕ ನಾಯಕ ನಟ ಎಂಬ ಹೆಗ್ಗಳಿಕೆ ಇವರದ್ದು. ದ್ರಾವಿಡರ ಕುಲ ಪುರೋಹಿತರು ಭಂಡಾರಿಗಳು ಎನ್ನುವ ಪುಸ್ತಕ ಬರೆದು ಅದನ್ನು ಸಮಾಜದವರಿಗೆ ಧರ್ಮಾರ್ಥವಾಗಿ ಓದಲು ನೀಡಿ ಸಮಾಜದ ಕೀಳರಿಮೆಯನ್ನು ಕಿತ್ತೊಗೆಯುವಲ್ಲಿ ಶ್ರಮ ವಹಿಸಿದ್ದಾರೆ
ಪೌರ ಕಾರ್ಮಿಕರೇ ನಿಜವಾದ ದೇವರು ಎಂದು ದೇವೆರ್ ಎಂಬ ಕಾದಂಬರಿ ಬರೆದು ನಂತರ ಅದನ್ನು ದೇವೆರ್ ಎಂಬ ಹೆಸರಲ್ಲಿಯೇ ತುಳು ಸಿನಿಮಾ ಮಾಡಿದ್ದು ಇವರ ಸಾಮಾಜಿಕ ಕಾಳಜಿಗೆ ಸಾಕ್ಷಿ.
ಈಗ ಪ್ರಚಾರದಲ್ಲಿ ಇರುವ ಕೊರಗಜ್ಜರ ಬಗ್ಗೆ 2002 ರಲ್ಲಿಯೇ ಬಬ್ಬುಸ್ವಾಮಿ ಕೊರಗತನಿಯರ ಕತೆಯ ಧರ್ಮಯೋಧರು ಎಂಬ ಕನ್ನಡ ಸಿನಿಮಾ ಮಾಡಿ ನಿರ್ದೇಶನದ ಜತೆ ಕೊರಗ ತನಿಯನಾಗಿ ಅಭಿನಯಿಸಿದ್ದರು.
ಸರ್ವರಿಗೂ ದೇವಸ್ಥಾನದ ಪ್ರವೇಶ ಸಿಗಬೇಕೆಂಬ ಕಾಳಜಿ ಬಾಲ್ಯದಿಂದಲೇ ಇವರಿಗೆ ಇತ್ತು.ಬಿಲ್ಲವರ ಮಹಾ ಗುರು ಪೂಜ್ಯ ನಾರಾಯಣ ಗುರುಗಳ ಬಗ್ಗೆ ಬಿಲ್ಲವ ನಾಯಕ ರಾಜಶೇಖರ ಕೋಟ್ಯಾನ್ ಅವರು ಸಿನಿಮಾ ಮಾಡಿದಾಗ ಬಿಲ್ಲವ ಸಮಾಜದಲ್ಲಿ ಖ್ಯಾತ ವಿದ್ವಾಂಸ ರಿದ್ದರೂ ಬನ್ನಂಜೆಯವರಿಂದಲೇ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಚಿತ್ರಕ್ಕೆ ಸಂಭಾಷಣೆ ಹಾಡುಗಳ ಬರೆಸಿದ್ದು ಇವರ ಪ್ರತಿಭೆಗೆ ಸಾಕ್ಷಿ. ಎರಡನೆ ಬಾರಿ ಬಂದ ಕೋಟಿ ಚೆನ್ನಯ ಚಿತ್ರಕ್ಕೂಇವರೇ ಸಂಭಾಷಣೆ ಬರೆದಿರುವುದು ನಮಗೆ ಹೆಮ್ಮೆಯ ಸಂಗತಿ .
ದೇವರ ಬಗ್ಗೆ ಅಚಲ ನಂಬಿಕೆ ಹೊಂದಿದ್ದರೂ ಮೂಡನಂಬಿಕೆಗಳನ್ನು ಇವರು ಪ್ರೋತ್ಸಾಹಿಸುವುದಿಲ್ಲ .ಬೆಂಗಳೂರಿನ ಪಾದರಾಯನ ಪುರದ ಸುಬ್ರಹ್ಮಣ್ಯ ದೇವಸ್ಥಾನ, ಮಲ್ಲೇಶ್ವರದ ಗಂಗಮ್ಮ ದೇವಸ್ಥಾನದ ಬಗ್ಗೆ ಅಭ್ಯಸಿಸಿ ಸ್ಥಳ ಪುರಾಣ ಬರೆದು ಕೊಟ್ಟಿದ್ದಾರೆ. ಇಂದಿಗೂ ಆ ದೇವಾಲಯಗಳ ವಾರ್ಷಿಕ ಉತ್ಸವದಂದು ಇವರನ್ನು ಕರೆದು ಸನ್ಮಾನಿಸಿ ಇವರಿಂದ ಉಪನ್ಯಾಸ ಮಾಡಿಸುತ್ತಾರೆ.
ಪ್ರಸಕ್ತ ಗಂಟ್ ಕಲ್ವೆರ್ ತುಳು ಚಿತ್ರ ತೆರೆ ಕಾಣಲು ಸಿದ್ದವಾಗಿದೆ.
ಗಂಟ್ ಕಲ್ವೆರ್ ಇದೇ ಬರುವ ಬೆಂಗಳೂರಲ್ಲಿ ಎಪ್ರಿಲ್ 13 ಮತ್ತು 14 ರಂದು ಪ್ರೀಮಿಯರ್ ಶೋ ನಡೆಯಲಿದೆ .ಮೇ 23 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ ಚಲನಚಿತ್ರ ಯಶಸ್ವಿಯಾಗಿಸೋಣ.
250 ಕ್ಕೂ ಅಧಿಕ ಕಲಾವಿದರು ನಟಿಸರುವ ತುಳು ಚಿತ್ರರಂಗದ ಶೋಲೆ ಎಂದೇ ಬಣ್ಣಿಸಬಹುದಾದ ಬಹುನಿರೀಕ್ಷಿತ ತುಳು ಚಲನಚಿತ್ರ ಬಿಡುಗಡೆಗೊಂಡು ಯಶಸ್ವಿಯಾಗಲಿ ಆ ಮೂಲಕ ನಮ್ಮ ಸಮಾಜದ ಹೆಮ್ಮೆಯ ಸಾಧಕ ಚಿತ್ರರಂಗದಲ್ಲಿ ಛಾಪು ಮೂಡಿಸಲಿ ಎಂದು ಭಂಡಾರಿ ವಾರ್ತೆ ಮನದುಂಬಿ ಹಾರೈಸುತ್ತಿದೆ.
-ಭಂಡಾರಿ ವಾರ್ತೆ