
ಸುಳ್ಯ ತಾಲೂಕು ಅಮಾರಪಡ್ನೂರು ಗ್ರಾಮದ ಕುಕ್ಕಿಜಡ್ಕ ಶ್ರೀ ನಾರಾಯಣ್ ಭಂಡಾರಿ (65 ವಷ೯) 21 ಮಂಗಳವಾರದಂದು ಸಂಜೆ ಹೃದಯಾಘಾತದಿಂದ ನಿಧನರಾದರು ಜನರಲ್ ಸ್ಟೋರ್ ಮತ್ತು ಸೆಲೂನು ಹಾಗೂ ಕೃಷಿ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ವೃತ್ತಿ ಜೀವನ ನಡೆಸುತ್ತಿದ್ದರು ಭಾರತೀಯ ಜನತಾಪಕ್ಷದಲ್ಲಿ ಗುರುತಿಸಿ ಕೊಂಡಿರುವ ಇವರು ಅಮಾರಪಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದಾರೆ.
ಪತ್ನಿ ಶ್ರೀಮತಿ ಕಲಾವತಿ ಪುತ್ತೂರು ಪಿಲೋಮಿನ ಕಾಲೇಜಿನ ಉಪನ್ಯಾಸಕ ಶ್ರೀ ಅನಿಲ್ ಭಂಡಾರಿ ಮತ್ತು ಎಲೆಕ್ಟ್ರಿಕಲ್ ಕಿರು ಗುತ್ತಿಗೆದಾರಾಗಿ ಕೆಲಸ ಮಾಡುತ್ತಿರುವ ಅವಿನಾಶ್ ಭಂಡಾರಿ ಯವರನ್ನು ಅಗಲಿದ್ದಾರೆ ಇವರ ಅಂತ್ಯಸಂಸ್ಕಾರದ ವಿಧಿ ವಿಧಾನಗಳು ಬುಧವಾರದಂದು ಮಧ್ಯಾಹ್ನ ಮೂರು ಗಂಟೆ ನಡೆಯಲಿದೆ ಎಂದು ಕುಟುಂಬಿಕರು ಭಂಡಾರಿ ವಾತೆ೯ಗೆ ತಿಳಿಸಿದ್ದಾರೆ.
ಇವರ ಪತ್ನಿ ಮಕ್ಕಳಿಗೆ ಹಾಗೂ ಕುಟುಂಬಿಕರಿಗೆ ನಿಧನದ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನ ಮಾತು ಭಂಡಾರಿ ವಾತೆ೯ಯು ಭಗವಂತನಲ್ಲಿ ಪ್ರಾರ್ಥತಿಸುತ್ತದೆ.