
ಮುಂಬೈ ನ ಶ್ರೀ ಗುರುದಾಸ್ ಭಂಡಾರಿ ಯವರ ಪತ್ನಿ ಶ್ರೀಮತಿ ಸುನಂದಾ ಗುರುದಾಸ್ ಭಂಡಾರಿಯವರು ಅಲ್ಪಕಾಲದ ಅಸೌಖ್ಯದಿಂದ ಉಡುಪಿಯ ಕಾಡಬೆಟ್ಟುವಿನಲ್ಲಿರುವ ಸ್ವಗೃಹದಲ್ಲಿ ಸೋಮವಾರ ತಾರೀಕು ಜುಲೈ 29ರಂದು ವಿಧಿವಶರಾದರು. ಅವರಿಗೆ ಸುಮಾರು 82 ವರ್ಷ ವಯಸಾಗಿತ್ತು.

ಮೃತರು ಪತಿ ಮುಂಬೈನ ಶ್ರೀ ಗುರುದಾಸ್ ಭಂಡಾರಿ ,ಆಸ್ಟ್ರೇಲಿಯಾದಲ್ಲಿರುವ ಮಗಳು ಶೈಲಜಾ ಭಂಡಾರಿ ಅಳಿಯ ವಿಷು ಭಂಡಾರಿ ,ಅಮೆರಿಕಾದಲ್ಲಿರುವ ಮಗ ಸುಧೀರ್ ಭಂಡಾರಿ ಸೊಸೆ ಶ್ವೇತಾ ಮೊಮ್ಮಕಳು, ಹಾಗೂ ಕುಟುಂಬಸ್ಥರು , ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಜುಲೈ 29 ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ಸ್ವಗೃಹವಾದ ಉಡುಪಿಯ ಕಾಡಬೆಟ್ಟುವಿನ ಯು ಕೆ ಭಂಡಾರಿ ಟವರ್ಸ್ ನಲ್ಲಿ ನಡೆಯಲಿದೆಯೆಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಇವರ ಅಗಲಿಕೆಯ ನೋವನ್ನು ಕುಟುಂಬಕ್ಕೆ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಮತ್ತು ಅಗಲಿದ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಬೇಡುತ್ತದೆ.