
ಭಂಡಾರಿ ಯುವಕ, ಯುವತಿಯರು PHD, CA, MBBS, BAMS, MS, MD, ME, M. Tech, MBA ಮುಂತಾದ ಸ್ನಾತಕೋತರ ಪದವಿ ಪಡೆದು ಸಮಾಜಕ್ಕೆ ಹೆಮ್ಮೆ ಗಳಿಸಿದ್ದಾರೆ. ಪ್ರತಿಭಾವಂತ ಯುವಕ/ ಯುವತಿಯರನ್ನು ಗುರುತಿಸಿ ಹೆಸರಾಂತ ಶಿಕ್ಷಣ ಸಂಸ್ಥೆಯಾದ ಸೂರ್ಯಚೈತನ್ಯ ಗ್ಲೋಬಲ್ ಅಕಾಡೆಮಿ ಮುಖೇನ ವಿಶೇಷ ಸನ್ಮಾನ ನಡೆಸುವ ಸಲುವಾಗಿ Online ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಹೈಸ್ಕೂಲ್ ಕ್ಯಾಂಪಸ್ ನ ಪರಶುರಾಮೇಶ್ವರ ಕ್ಷೇತ್ರ ದಲ್ಲಿ ದಿನಾಂಕ 21-02-2020 ಶುಕ್ರವಾರ ಮಹಾಶಿವರಾತ್ರಿ ಪುಣ್ಯಕಾಲದಲ್ಲಿ ಸ್ವತಃ ತಮ್ಮ ದಿವ್ಯ ಹಸ್ತದಲ್ಲಿ ಶಿವಲಿಂಗಕ್ಕೆ ರುದ್ರಾಭಿಷೇಕ ನೆರವೇರಿಸಿ ಪೂರ್ವಾಹ್ನ ಗಂ. 11.15 ರಿಂದ ಜರುಗುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಕೇಮಾರು ಈಶ ವಿಠಲ ಸ್ವಾಮೀಜಿ, ಶ್ರೀ ಡಿ.ವಿ. ಸದಾನಂದ ಗೌಡರು, ನಳಿನ್ ಕುಮಾರ್ ಕಟೀಲ್ ಹಾಗೂ ಇತರ ಗಣ್ಯರ ಹಾರೈಕೆಯಲ್ಲಿ ಆಯ್ಕೆಯಾದ ಎಲ್ಲ ಅರ್ಹ ಯುವಸಾಧಕರನ್ನು ಅದ್ಧೂರಿಯಿಂದ ಸನ್ಮಾನಿಸಲಾಗುವುದು .
ನಿಯಮ ಮತ್ತು ನಿಬಂಧನೆಗಳು:
1. PHD, CA, MBBS, BAMS, MS, MD, ME, M. Tech, MBA ಸ್ನಾತಕೋತರ ಅಥವಾ ಅತ್ಯುನ್ನತ ಪದವಿಯನ್ನು 2016 ಮತ್ತು ಆ ನಂತರ ಪಡೆದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
2. ಅರ್ಜಿ ಸಲ್ಲಿಸುವವರು ಅರ್ಜಿಯ ಎಲ್ಲಾ ಕಾಲಂ ಗಳನ್ನು ಕಡ್ಡಾಯವಾಗಿ ತುಂಬಬೇಕು. ನಿಮ್ಮ ಪದವಿ ಪ್ರಮಾಣ ಪತ್ರವನ್ನು PDF Format ನಲ್ಲೇ ಅಪ್ ಲೋಡ್ ಮಾಡತಕ್ಕದ್ದು.
3. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆ ಮತ್ತು ಮೂಲತಃ ತುಳುನಾಡಿನ ನಾಗಮೂಲ ಮತ್ತು ದೈವಮೂಲ ಹೊಂದಿರುವ ವಿಶ್ವದೆಲ್ಲೆಡೆ ನೆಲೆಸಿರುವ ಭಂಡಾರಿ ಯುವ ಸಾಧಕರು ಅರ್ಜಿ ಸಲ್ಲಿಸಲು ಅವಕಾಶವಿದೆ.
4. ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ ವೈಯಕ್ತಿಕ ಆಮಂತ್ರಣ ನೀಡಲಾಗುವುದು.
5. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07/02/2020
ಈ ಕೆಳಗಿನ Apply Online ಗೆ Click ಮಾಡಿ ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸಿ
Apply Online
ಸಂಚಾಲಕರು: ವಿದ್ವಾನ್ ಶಂಭುದಾಸ್ ಗುರೂಜಿ, B.Tech.
ಜ್ಯೋತಿಷ್ಯ ವಿಶಾರದ, ಜ್ಯೋತಿಷ್ಯ ವಿದ್ವನ್ಮಣಿ, ವಾಸ್ತು ತಜ್ಞ- ಧರ್ಮದರ್ಶಿ
ಮೊ: 9686811946 Email: suryachaitanyaga@gmail.com