ಬ್ರಿಟಿಷರ ಆಡಳಿತದಿಂದ ಭಾರತ ದೇಶ 1947 ಆಗಸ್ಟ್ 15 ರಂದು ಸ್ವತಂತ್ರವಾಯಿತು. ನಾವೀಗ ಸಂಭ್ರಮಿಸುತ್ತಿರುವ ಎಪ್ಪತೈದನೇ ಸ್ವಾತಂತ್ರ್ಯ ದಿನಾಚರಣೆಯ ಹಿಂದೆ ನಮ್ಮ ಹಿರಿಯರು ಮಾಡಿರುವ ಅದೇಷ್ಟೋ ತ್ಯಾಗ ಬಲಿದಾನವಿದೆ.
ಕೊರೊನಾ ಪ್ರವೇಶ ಆಗುವ ಮೊದಲು ಶಾಲಾ ಕಾಲೇಜಿನಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಿಹಿ ಹಂಚಲಾಗತ್ತಿತ್ತು.ಅಲ್ಲದೇ ಸ್ವಾತಂತ್ಯ್ರಕ್ಕಾಗಿ ಮಡಿದ ಅಸಂಖ್ಯಾತ ಜನರ ಬಲಿದಾನವನ್ನು ಹೇಳುತ್ತಿದ್ದರು.ಅದನ್ನು ಕೇಳುವಾಗ ಮೈನವಿರೇಳುವುದು. ಅಬ್ಬಾ ಅದೇಷ್ಟೋ ಹೋರಾಟದ ಫಲವಾಗಿ ನಾವಿಂದು ಸ್ವತಂತ್ರ್ಯವಾಗಿ ಬದುಕುತ್ತಿದ್ದೇವೆ.
ಆ ದಿನ ಹಬ್ಬವೇ ಸರಿ ಹಾಡು,ನೃತ್ಯ,ನಾಟಕ,ಭಾಷಣ,ಪ್ರಬಂಧ ಹೀಗೆ ಇನ್ನಿತರ ಚಟುವಟಿಕೆಗಳ ಮೂಲಕ ಆಚರಿಸಿದ ಸ್ವಾತಂತ್ರ್ಯ ದಿನಾಚರಣೆ ಈಗಲೂ ಮನದಲ್ಲಿ ಅಚ್ಚೆಯಾಗಿ ಉಳಿದುಬಿಟ್ಟಿದೆ
ಆದರೆ ಕೋವಿಡ್ ನಿಂದಾಗಿ ಶಾಲಾ ಕಾಲೇಜು ಮುಚ್ಚಿವೆ.ಮನೆಯಲ್ಲಿಯೇ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟದ ಮಗ್ಗುಲುಗಳ ಅರಿವು ಮೂಡಿಸುವುದು ಪೋಷಕರ ಜವಾಬ್ದಾರಿ ಮತ್ತು ಕರ್ತವ್ಯವೂ ಹೌದು
ಪ್ಲಾಸ್ಟಿಕ್ ಧ್ವಜ ಖರೀದಿಸಿ ಒಂದು ದಿನಕ್ಕಾಗಿ ದೇಶಭಕ್ತಿ ತೋರ್ಪಡಿಸಿ ನಂತರ ಒಂದೆಡೆ ಬಿಸಾಡುತ್ತೇವೆ.ಲಾರಿಗಟ್ಟಲೆ ತ್ಯಾಜ್ಯ ಒಂದೇ ದಿನದಲ್ಲಿ ಉತ್ಪತ್ತಿಯಾಗುತ್ತದೆ.
ರಜಾ ಸಿಕ್ಕಿತೆಂದು ಕೆಲವರು ಪ್ರವಾಸಕ್ಕೆ ಹೊರಟರೇ ಇನ್ನೂ ಹಲವರು ಮನೆಯಲ್ಲಿ ನಿದ್ದೆ ಹೊಡೆಯುತ್ತಾರೆ.ಅತ್ತ ಜಿಲ್ಲಾಡಳಿತ ಆಚರಿಸುವ ಸ್ವಾತಂತ್ರ್ಯ ದಿನಾಚರಣೆಗೆ ಜನರೇ ಇರುವುದಿಲ್ಲ.ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂಬ ಆದೇಶ ಹೊರಡಿಸುವ ಮಟ್ಟಕ್ಕೆ ಪರಿಸ್ಥಿತಿ ಬಂದಿದೆ.
ಕೊರೋನ ಮಹಾಮಾರಿಯಿಂದ ಆಚರಣೆ ಸರಳವಾಗಿದ್ದರೂ ಪರಿಸರ ಸ್ನೇಹಿಯಾಗಿ ದೇಶಕ್ಕಾಗಿ ಮಡಿದವರನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ದಿನ ಆಚರಿಸೋಣ.
ಗ್ರೀಷ್ಮಾ ಭಂಡಾರಿ
ಪ್ರಥಮ ಎಂ.ಎ
ಅರ್ಥಶಾಸ್ತ್ರ ವಿಭಾಗ
ವಿಶ್ವವಿದ್ಯಾನಿಲಯ ಕಾಲೇಜು
ಮಂಗಳೂರು