January 18, 2025
bhandaryvarthe independence day

ಅಂದು,
ಮನದ ಭಾವ ಲಹರಿಯಲಿ‌ ಮೂಡಿತೊಂದು ಮಿಂಚು…..
ಅಗೋ‌ ಸ್ವಾತಂತ್ರ್ಯ ಬಂತು….

ಇಂದು,
ರೋಗರುಜಿನದ ಹಾದಿಯಲಿ
ಮೆರೆಯುತಿದೆ ಒಳಸಂಚು….‌‌
ಯಾಕೆ ಸ್ವಾತಂತ್ರ್ಯ ಬಂತು???

ಅಂದು,
ಕಾಡ ಕತ್ತಲಲಿ‌ ….
ಸಂಕ್ರಮಣದ ಹಾದಿಯಲಿ… ಮೊಳಗಿತು ಕಿಚ್ಚು
ಅದೋ ಸ್ವಾತಂತ್ರ್ಯ ಬಂತು….

ಇಂದು,
ನಡುಬಿಸಿಲ ಸುಡು ಮಧ್ಯಾಹ್ನ ಹನಿ ನೀರಿಗೂ ಲಂಚ !!?
ಯಾರಿಗೆ ಬಂತು ಸ್ವಾತಂತ್ರ್ಯ??

ಅಂದು,
ಬಸಿರ ವೇದನೆಯಲಿ ಭಾರತಾಂಬೆ ನಕ್ಕಳು …..
ಅದೋ ಸ್ವಾತಂತ್ರ್ಯ ಬಂತು….

ಇಂದು,
ಹಸಿರ ಕಳಚಿದ ವೇದನೆಯಲಿ‌ ಭಾರತಾಂಬೆ ಬಿಕ್ಕಿದಳು…
ಯಾಕೆ ಸ್ವಾತಂತ್ರ್ಯ ಬಂತು? ……

✍🏻 ಎ.ಆರ್.ಭಂಡಾರಿ‌ ವಿಟ್ಲ.

Leave a Reply

Your email address will not be published. Required fields are marked *