
ಜಾತಿಯೆಂಬ ವಿಷ ಬೀಜ ಬಿತ್ತಿ ಸುತ್ತ
ಒಡೆದು ಆಳಲು ಯತ್ನಿಸಿದರು ಸತತ
ಭಾರತಾಂಬೆಯನು ಮಾಡಿದರು ಸ್ವಂತ
ಮಿತಿಮೀರಿತು ಪರಕೀಯರ ದುಷ್ಕೃತ್ಯ
ಮಾಡುತ್ತ ಹೋರಾಟಗಾರರ ಹತ್ಯ
ಪ್ರಜೆಗಳಿಗಿದು ನುಂಗಲಾರದ ಸತ್ಯ
ಗೆಲ್ಲಲು ಬ್ರಿಟಿಷರು ಮಾಡಿದರು ಕುತಂತ್ರ
ಭಾರತೀಯರದು ಅದನ್ನುಮೀರಿದ ಮಂತ್ರ
ಹೆಣೆದರು ಆಂಗ್ಲರ ವಿರುದ್ಧ ಪ್ರತಿತಂತ್ರ
ಕೊನೆಯುಸಿರಿರುವರೆಗೆ ಹೊರಡುತಾ
ಮರಳಿ ನಿರ್ಮಿಸಿದರು ಭವ್ಯ ಭಾರತ
ಸ್ವತಂತ್ರವೆಂಬ ಗೆಲುವಿನ ಮೆಟ್ಟಿಲು ಏರುತ
ದೇಶಕ್ಕಾಗಿ ನಮ್ಮವರ ಕೊಡುಗೆ ಧೈತ್ಯ
ಹೋರಾಟದಿಂದಲೇ ಆಯ್ತು ಆಂಗ್ಲರ ಅಂತ್ಯ
ದೇಶಕ್ಕಿಂದು ಅಮೃತಮಹೋತ್ಸವದ ಸ್ವಾತಂತ್ರ್ಯ.
ರಚನೆ: ಪ್ರಕೃತಿ ಭಂಡಾರಿ ಆಲಂಕಾರು