
ಸಾರ ವಿಲ್ಲದ ಕವನ
ಭಾವ ವಿಲ್ಲದ ಚರಣ
ಶ್ರುತಿಯಿಲ್ಲದ ಗಾಯನ
ಮನಸ್ಸಿಲ್ಲದ ವಾಚನ
ಕೇಳಲು ಕೊಳೆ ಮಾಂಸ ಕಂಡ
ಕರಿ ಕಾಗೆಯಂತಿರ್ಪುದು ನಾಗೆಶ್ವರಾ….!
ನಗುವಿಲ್ಲದ ಮೊಗ
ಸುಳಿವಿಲ್ಲದ ನದಿ
ಚಳಿ ಇಲ್ಲದ ಕಾಲ
ಇರಲು ಮರಳು ಗಾಡಿನ
ಹರಳಿನ ಸುಳಿರ್ಗಾಳಿ ಯಂತೆ ನಾಗೆಶ್ವರಾ…!
ಬಿಂದಿ ಇಲ್ಲದ ಮೋರೆ
ಕಿವಿಯಲಿಲ್ಲದ ಓಲೆ
ಸೀರೆ ಉಡಲೋಲ್ಲದ ನಾರಿ
ನಯ ವಿನಯ ವಿಲ್ಲದ ನೀರೇ
ನೋಡಲು ಸ್ಮಶಾನ ದಿ ಹೆಣಕಾಯ್ವ
ಮಾರಿಯಂತಿರ್ಪಳು ನಾಗೆಶ್ವರಾ……!
✍🏻: ರಮೇಶ್ ಭಂಡಾರಿ ಬೆಳ್ವೆ