ಸುರತ್ಕಲ್ ತಡಂಬೈಲ್ ನ ದಿವಂಗತ ಪೂವ ಭಂಡಾರಿಯವರ ಧರ್ಮಪತ್ನಿ ಅಮಣಿ ಪೂವ ಭಂಡಾರಿಯವರು ಡಿಸೆಂಬರ್ 23 ರ ಬೆಳಗಿನ ಜಾವ 4 ಗಂಟೆಗೆ ತಡಂಬೈಲ್ ನ ತಮ್ಮ ಸ್ವಗೃಹ ಉಷಾ ನಿವಾಸ ದಲ್ಲಿ ಕೊನೆಯುಸಿರೆಳೆದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.
Suratkal Thadambailu Ammani Poova Bhandary aged about 84 years expired on 23rd December at her residence Usha Nivasa Suratkal.
ಅವರು ನಾಲ್ಕು ಜನ ಗಂಡು ಮಕ್ಕಳಾದ ಮುಂಬಯಿಯಲ್ಲಿ ವಾಸವಿರುವ ಶ್ರೀ ಮೋಹನ್ ಭಂಡಾರಿ ಮತ್ತು ಶ್ರೀ ಜಯ ಭಂಡಾರಿ, ಹಳೆಯಂಗಡಿಯ ಶ್ರೀ ಅಶೋಕ್ ಭಂಡಾರಿ, ತಡಂಬೈಲ್ ನ ಶ್ರೀ ವೆಂಕಟೇಶ್ ಭಂಡಾರಿ, ಇಬ್ಬರು ಹೆಣ್ಣು ಮಕ್ಕಳಾದ ಬೆಂಗಳೂರಿನಲ್ಲಿರುವ ಶ್ರೀಮತಿ ಸುಜಯ ವಿಜಯ ಭಂಡಾರಿ ಮತ್ತು ಶಿರಾಳಕೊಪ್ಪದಲ್ಲಿರುವ ಶ್ರೀಮತಿ ಉಷಾ ರಮೇಶ್ ಭಂಡಾರಿ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಡಿಸೆಂಬರ್ 23 ರ ಸಂಜೆ ಐದು ಗಂಟೆಗೆ ಸುರತ್ಕಲ್ ನ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು. ಅಮಣಿ ಭಂಡಾರಿಯವರ ಕುಟುಂಬದವರಿಗೆ ಹಾಗೂ ಅವರ ಬಂಧುಬಳಗದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ದಯಪಾಲಿಸಲಿ, ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಪ್ರಾರ್ಥಿಸುತ್ತದೆ.
–ಭಂಡಾರಿವಾರ್ತೆ.