ವಿಟ್ಲ ಕುಟುಂಬದ ಹಿರಿಯರಾದ ತಂಗಿ ಭಂಡಾರಿ (ನಿವೃತ್ತ ಸಬ್ ರಿಜಿಸ್ಟ್ರಾರ್ ದಿವಂಗತ ಲಿಂಗಪ್ಪ ಭಂಡಾರಿ ಕುತ್ತಾರು ರವರ ಧರ್ಮಪತ್ನಿ)ಯವರು ಅಲ್ಪಕಾಲದ ಅನಾರೋಗ್ಯದಿಂದ ಫೆಬ್ರವರಿ 15 ರ ಗುರುವಾರ ಬೆಳಗ್ಗೆ 10:30 ಕ್ಕೆ ಸುರತ್ಕಲ್ ನ ಚೊಕಬೆಟ್ಟುವಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು.
ಅವರು ಮಕ್ಕಳಾದ ಶ್ರೀಮತಿ ರೋಹಿಣಿ ಕೃಷ್ಣಪ್ಪ ಕಟ್ಲ, ಶ್ರೀಮತಿ ನಳಿನಿ ಬಾಲಕೃಷ್ಣ ಭಂಡಾರಿ, ಮಗ ಶ್ರೀ ಉಮೇಶ್ ವಿಟ್ಲ, ಕುಳಾಯಿ ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಇಹಲೋಕ ಯಾತ್ರೆಯನ್ನು ಪೂರೈಸಿದ ತಂಗಿ ಲಿಂಗಪ್ಪ ಭಂಡಾರಿಯವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಮತ್ತು ಬಂಧುವರ್ಗದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಪ್ರಾರ್ಥಿಸುತ್ತದೆ.
—ಭಂಡಾರಿವಾರ್ತೆ.