January 18, 2025

ನಿನ್ನ ಹುಡುಕಾಟದಲ್ಲಿ ಹುದುಗಿ
ತಪೋ ಭೂಮಿಯಲಿ ಕುಳಿತೆ
ತಪ್ಪಸಿನ ಆಳಕ್ಕೆ ಇಳಿದು
ಧ್ಯಾನದಲಿ ಮುಳುಗಿದೆ |

ತಡವರಿಸಿತು ನನ್ನ ತಪ್ಪಸ್ಸು
ನಿನ್ನ ಹೆಜ್ಜೆಯ ಸದ್ದಲ್ಲಿ
ಕಳಚಿ ಬಿದ್ದಿತು ನನ್ನ ಏಕಾಗ್ರತೆ
ನಿನ್ನ ಸ್ವರದ ಗುಂಗಲಿ
ನಿನ್ನ ಹಸ್ತದ ಆ ಬಿಸಿಗೆ
ಕೊರೆವ ಚಳಿಯು ಬೆಂಕಿಯಾಯಿತು.
ಅದೆಷ್ಟೋ ವರ್ಷದ ತಪ್ಪಸ್ಸಿಗೆ ಕಲ್ಲಾದ ಈ ದೇಹ
ನಿನ್ನ ಕಣ್ಣಕಾಂತಿಗೆ ಚಿಟ್ಟೆಯಾಯಿತು
ಜಡತ್ವ ಹಿಡಿದ ಮನದ ಪೊರೆ ಕಳಚಿ
ಝರಿಯಾಗಿ ಹರಿದು ಹೋಯಿತು|

ನಿನ್ನ ಆ ಕಣ್ಣಿನ ನೋಟಕೆ
ಮತ್ತೊಮ್ಮೆ ನಾ ಕರಗಿ ಹೋಗಲೆ…?
ನಿನ್ನ ಆ ಪ್ರೀತಿಯ ಶಾಖಕ್ಕೆ
ಬೆಚ್ಚಗೆ ಬಂಧಿಯಾಗಲೇ…?

ಪ್ರತಿಭಾ ಭಂಡಾರಿ ಹರಿಹರಪುರ

1 thought on “ತಪ್ಪಸ್ಸು

Leave a Reply

Your email address will not be published. Required fields are marked *