
ದಕ್ಷಿಣ ಕನ್ನಡ ಜಿಲ್ಲೆಯ ಪರಂಗಿಪೇಟೆಯ ಶ್ರೀ ಶೇಖರ್ ಭಂಡಾರಿ ಮತ್ತು ಶ್ರೀಮತಿ ಭಾಗ್ಯಲಕ್ಷ್ಮಿ ಭಂಡಾರಿ ದಂಪತಿಯ ಪುತ್ರ ತೇಜಸ್ ಭಂಡಾರಿ ಇವರು 2021-22 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 542 ಅಂಕಗಳೊಂದಿಗೆ (86%) ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ತೇಜಸ್ ಭಂಡಾರಿ ಇವರು ನಿತ್ಯಾ ಸಹಾಯ ಮಾತ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ. ತೇಜಸ್ ಭಂಡಾರಿ ಇವರು ಶಿಕ್ಷಣದಲ್ಲಿ ಇನ್ನಷ್ಟು ದೊಡ್ಡ ಸಾಧನೆ ಮಾಡಲಿ , ಪೋಷಕರಿಗೆ ,ಸಮಾಜಕ್ಕೆ ಹೆಮ್ಮೆ ತರಲಿ, ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಅಭಿನಂದಿಸುತ್ತದೆ .