
ತೆಲಂಗಾಣ ಎಂಬ ಹೆಸರು ತಪ್ಪು.ಅದರ ಸರಿಯಾದ ಹೆಸರು “ತಲಂಗಾಣ”. ತಲಂಗಾಣ ಎಂಬ ಹೆಸರಿನಲ್ಲಿ “ತಲಂ” ಮತ್ತು “ಅಂಗಣ” ಎಂಬ ಎರಡು ಪದಗಳು ಇವೆ.ತಲಂ ಎಂದರೆ ತಲೆ ಅಥವಾ ಶಿರ ಎಂಬ ಅರ್ಥ. ಅಂಗಣ ಎಂದರೆ ಒಂದು ಜಾಗ ಸ್ಥಳ ಅಥವಾ ಭೂಮಿ. ತೆಲುಗು ಭಾಷೆ ಆಡುವ ಪ್ರದೇಶ.ಆಂಧ್ರ ಪ್ರದೇಶ ಎಂದರೆ ಅಡಿ ಕೆಳಗಿನ ಪ್ರದೇಶ. ತೆಲುಗು ಆಡುವ ಕೆಳ ಪ್ರದೇಶದ ಭೂಮಿ ಸ್ಥಳ.ತಲಂಗಾಣ ಮೇಲಿನ ಭೂಮಿ ಪ್ರದೇಶ. ಆಂಧ್ರ ಕೆಳಗಿನ ಭೂಮಿ ಪ್ರದೇಶ .ಒಟ್ಟಿನಲ್ಲಿ ತೆಲುಗು ಭಾಷೆಯನ್ನು ಮಾತಾಡುವ ಮೇಲಿನ ಭೂಮಿ ಮತ್ತು ಕೆಳಗಿನ ಭೂಮಿ.
ಅಂಗಣ ಮತ್ತು ಪ್ರದೇಶ ಪದಗಳು ಒಂದೇ ಅರ್ಥವನ್ನು ಕೊಡುತ್ತದೆ. ಮೇಲಿನ, ಕೆಳಗಿನ ತೆಲುಗು ಭಾಷೆಯನ್ನು ಮಾತಾಡುವ ಪ್ರದೇಶ ಭೂಮಿ. ತೆಲಂಗಾಣ ಮೇಲೆ ಮುಡಿಯಲ್ಲಿದೆ. ಆಂಧ್ರ ಪ್ರದೇಶ ಕೆಳಗೆ ಅಡಿಯಲ್ಲಿದೆ.ಭಾರತದ ನಕ್ಷೆ ನೋಡಿ.
ಆ ಕಾಲದಲ್ಲೇ ತೆಲುಗು ಭಾಷೆಯನ್ನು ಮಾತನಾಡುವ ಪ್ರದೇಶವನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿದ್ದಾರೆ. ಮೇಲಿನ ಅಂಗಣ ಪ್ರದೇಶ ಮತ್ತು ಕೆಳಗಿನ ಅಂಗಣ ಪ್ರದೇಶ. ತಲಂ ಎಂದರೆ ತಲೆ ಶಿರ ಎತ್ತರದ ತೆಲುಗು ಭಾಷೆಯನ್ನು ಮಾತಾಡುವ ಪ್ರದೇಶ. ಆಂಧ್ರ ಅಂದರೆ ಕೆಳಗಿನ ತಗ್ಗಾದ ತೆಲುಗು ಭಾಷೆಯನ್ನು ಮಾತಾಡುವ ಅಡಿಯ ಪ್ರದೇಶ. ಭಾರತ ದೇಶದ ನಕ್ಷೆ ಅಥವಾ ತೆಲಂಗಾಣ ಮತ್ತು ಆಂಧ್ರಪ್ರದೇಶದ ನಕ್ಷೆ ನೋಡಿದರೆ ತೆಲುಗು ಭಾಷೆ ಮಾತಾಡುವ ಪ್ರದೇಶವನ್ನು ವಿಂಗಡಿಸಿರುವುದು ಕಂಡು ಬರುತ್ತದೆ.ಕೃಷ್ಣಾ ನದಿಯು ಈ ಎರಡು ರಾಜ್ಯಗಳ ಮಧ್ಯದಲ್ಲಿ ಹರಿಯುವುದು ಕಂಡು ಬರುತ್ತದೆ.ಅರ್ಥಪೂರ್ಣವಾಗಿ ತೆಲುಗು ಪ್ರಾಂತ್ಯದ ಎರಡು ಭಾಗಗಳು ಕಂಡು ಬರುತ್ತದೆ.ಈ ಎರಡು ಪ್ರಾಂತ್ಯಗಳ ಗಡಿ ಆಗಿದೆ ಕೃಷ್ಣಾ ನದಿ.
ಆಂಧ್ರ ಎಂಬ ಪದವು ತುಲು ಭಾಷೆಯದ್ದು ಆಗಿದೆ. ನಮ್ಮ ಹೊಟ್ಟೆಯ ಕೆಳಭಾಗವನ್ನು ಕನ್ನಡದಲ್ಲಿ ಕಿಬ್ಬೊಟ್ಟೆ ಎಂದು ಕರೆಯುತ್ತಾರೆ.ಹಾಗೆನೆ ತೆಲುಗು ಭಾಷೆಯಲ್ಲಿ ದಿಗುವ ಉದರಂ,ಪೊಟ್ಟಿ ಕಡುಪು ಎನ್ನುತ್ತಾರೆ. ಅಡಿವಯರ್ ಎಂದು ಮಲಯಾಳಂ ಭಾಷೆಯಲ್ಲಿ ಕರೆದರೆ ಅಡಿವಯಿರ್ ಎಂದು ತಮಿಳು ಭಾಷೆಯಲ್ಲಿ ಕರೆಯುತ್ತಾರೆ. ಅದೇ ಕಿಬ್ಬೊಟ್ಟೆಯನ್ನು ತುಲು ಭಾಷೆಯಲ್ಲಿ “ಆಂಧ್ರವಾಯಿ”ಎಂದು ಕರೆಯುವರು. ಆಂಧ್ರ ವಾಯಿ ಎಂದರೆ ಹೊಟ್ಟೆಯ ಅಡಿ ಭಾಗ.
ಮುಡಿ ಅಥವಾ ಶಿರವನ್ನು ತಮಿಳ್ ಭಾಷೆಯಲ್ಲಿ ತಲೈ ಎಂದರೆ ಮಲಯಾಳಂ ಭಾಷೆಯಲ್ಲಿ ತಲ ಎನ್ನುವರು. ಕನ್ನಡ ಭಾಷೆಯಲ್ಲಿ ತಲೆ ಮತ್ತು ತೆಲುಗು ಭಾಷೆಯಲ್ಲಿ ತಲಂ ಎಂದು ಕರೆಯುತ್ತಾರೆ.ತುಲು ಭಾಷೆಯಲ್ಲಿ “ತರೆ” ಎನ್ನುವರು.ತುಲು ಭಾಷೆಯಲ್ಲಿ ಹೆಚ್ಚಾಗಿ “ಲ”ಕಾರಕ್ಕೆ “ರ” ಕಾರ ಪ್ರಯೋಗ ಮಾಡುವುದು ಸಾಮಾನ್ಯ. ಅದರಂತೆ ಇಲ್ಲೂ “ರ”ಕಾರದಲ್ಲಿ ಉಚ್ಛಾರಿಸಿ ತಲೆ – ತರೆ ಎಂದಿದ್ದಾರೆ.
ಆ ಕಾಲದಲ್ಲಿ ತುಲುನಾಡು ಪ್ರಬಲ ಪ್ರಲಯಕ್ಕೆ ಸಿಲುಕಿ ಮುಳುಗಿ ಬಿಡುತ್ತದೆ.ತುಲುನಾಡಿನ ಮೂಲವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ತುಲುನಾಡ್ ತೊರೆದು ಹಿಂಡು ಹಿಂಡಾಗಿ ಕೇರಳ,ತಮಿಳುನಾಡು, ತಲಂಗಾಣ, ಆಂಧ್ರ ,ಕಳಿಂಗ ಶ್ರೀಲಂಕ, ಪ್ರಾಂತ್ಯದತ್ತ ವಲಸೆ ಹೋಗುವರು.ಅಲ್ಲಲ್ಲಿ ತುಲು ಭಾಷೆಯನ್ನು ಬಿತ್ತುವರು. ತೆಲುಗು ಭಾಷೆಯೊಳಗೆ ತುಲು ಭಾಷೆ ಪ್ರಯೋಗಿಸುವರು.ಅಲ್ಲಲ್ಲಿ ಬೀಡು ಬಿಡುವರು.ಅಲ್ಲಿನ ಭಾಷೆಗಳನ್ನು ಕಲಿತು ಅಲ್ಲೇ ನೆಲೆ ಆಗುವರು.”ಆಂಧ್ರ” ಎಂದು ತುಲು ಭಾಷೆಯ ಪದವನ್ನು ಅಲ್ಲಿನ ಪ್ರಕೃತಿಯ ರೂಪ ಹಿನ್ನಲೆ ಲಕ್ಷಣ ವಿನ್ಯಾಸ ಕಂಡು ಕರೆದಿದ್ದಾರೆ.
ತುಲುನಾಡಲ್ಲಿ “ಅಂದೆಲ್”ಎಂಬ ನೀರು ತುಂಬಿಸಿ ಇಡುವ ದೊಡ್ಡ ಮಣ್ಣಿನ ಸಾಧನ ಇದೆ .ಇದನ್ನು ಅಂಡೆ, ಹಂಡೆ, ಕೊಪ್ಪರಿಗೆ,ಕುಂಡ,ಕಪ್ಪಲ್ (an earthen)ಎಂಬ ಹೆಸರಲ್ಲೂ ಕರೆಯುವರು.ನಮ್ಮ ಹೊಟ್ಟೆಯನ್ನು “ಅಂದೆಲ್” ಗೆ ಹೋಲಿಕೆ ಮಾಡಿದ್ದರು ತುಲುವ ಮೂಲ ನಿವಾಸಿಗಳು.ಅಂದೆಲ್ ಎಂಬ ಹಂಡೆಯ ಅಡಿಯ ಭಾಗವನ್ನು ಅಂದೆಲ್ ವಾಯಿ ಎಂದು ಕರೆದಿದ್ದಾರೆ. ಅಂದೆಲ್ ಶಬ್ಧಕ್ಕೆ “ರ”ಕಾರ ಪ್ರಯೋಗ ಮಾಡಿ “ಅಂದೆರ್”ಎಂದಿದ್ದಾರೆ.ಅಂದೆರ್ ಪದವು ಕ್ರಮೇಣವಾಗಿ ಅಂದರ, ಅಂದ್ರ , ಆಂಧ್ರ ಆಯಿತು. ಆಂಧ್ರದ ತಳಭಾಗದಲ್ಲಿ ಬಂಗಾಳ ಕೊಲ್ಲಿ ಸಮುದ್ರ ಇದೆ.
ತುಲುನಾಡಲ್ಲಿ ಅಂಡಾರ್, ಅಂಡೇಲ್ ಎಂಬ ಊರುಗಳು ಇವೆ.ಈ ಊರುಗಳ ವಿನ್ಯಾಸ ಅಂಡೆ|ಹಂಡೆಯಂತೆ ಆಳವಾಗಿ ಗುಳಿಯಂತೆ ಕಾಣುತ್ತದೆ. ಒಟ್ಟಿನಲ್ಲಿ ತಲಂಗಾಣ ಮೇಲೆ ಶಿರ ಮುಡಿಯಲ್ಲಿದ್ದರೆ ಆಂಧ್ರ ಅಡಿಯಲ್ಲಿ ಆಳವಾಗಿ ಕೆಳಗಿದೆ.ಇದಕ್ಕೆ ಸಾಕ್ಷಿ ಭಾರತದ ನಕ್ಷೆ.ಊರುಗಳ ಹೆಸರುಗಳಲ್ಲಿ “ದ”ಕಾರಕ್ಕೆ “ಡ”ಕಾರ ಬಂದು ಅಂದಾರ್ – ಅಂಡಾರ್,ಅಂದೇಲ್-ಅಂಡೇಲ್ ಆಗಿದೆ.
ಐ.ಕೆ.ಗೋವಿಂದ ಭಂಡಾರಿ.ಕಾರ್ಕಳ
(ನಿವೃತ್ತ ವಿಜಯಾ ಬ್ಯಾಂಕ್ ಮ್ಯಾನೆಜರ್)