
ತಾಯಿ ಪುಟ್ಟ ಕಂಗಳ ದೀಪು
ನೀ ನನ್ನ ಮುದ್ದು ಪಾಪು
ಬೆಳದಿಂಗಳ ಚಂದ್ರನಂತೆ ಬಂದೆ
ನನ್ನ ದುಃಖ ದುಮ್ಮಾನವ ಕೊಂದೆ
ನಿನ್ನ ನಗುವಲೢಡಗಿದೆ ನನ್ನ ಸು:ಖ
ನಾನೂ ನಗುವೆ ಮರೆತೆಲ್ಲಾ ದು:ಖ
ಬದುಕಿನ ಜಂಜಾಟದಲ್ಲಿ ಮುಳುಗಿದ
ನನಗೆ ಆಸರೆ ಈ ನಿನ್ನ ತುಂಟ ನಗೆ
ಒಂದೇ ಜೀವವಾಗಿದ್ಧೆವು ನವಮಾಸದಿ
ನೀನೀಗ ಹೊಸಜೀವ ಈ ಜಗದಿ
ಮನದುಂಬಿ ಸ್ವಾಗತಿಸುವೆ ನಾ ನಿನ್ನ
ನೀನಾಗಬೇಕು ಈ ದೇಶದ ಚಿನ್ನ
