ತೈಲಬೆಲೆ
ಏರುತಿದೆ ತೈಲದರ
ಹಾಕಬೇಕು ಮೂಗುದಾರ |
ಸಾಧ್ಯವಿರುವ ದೂರದಷ್ಟು
ನಡೆಯಯಬೇಕು ಅಷ್ಟು-ಇಷ್ಟು|
ಉಳಿಸಿದರೆ ಹನಿಹನಿ
ಸಾಗಲಹುದು ಬಾಳದೋಣಿ |
ನಾಳೆಯೆಂಬ ಬದುಕಿಗಾಗಿ
ಮಾಡಬೇಕು ತ್ಯಾಗನೋಡಿ |
ಬೆಲೆ ಏರಿಕೆ ಏನೆ ಇರಲಿ
ತೈಲಬಳಕೆ ಕಡಿಮೆ ಇರಲಿ
ಗಗನಕೇರಿ ಜನರ ದಣಿಪ
ತೈಲದೊಡನೆ ಇರಲಿ ಅನುಕಂಪ
ಉಳಿಕೆ ನಿರತ ನಡೆಯುತಿರಲಿ
ಏರಿದ ಬೆಲೆಗೆ ಸವಾಲಾಗಲಿ