January 19, 2025
Selfi_contest20181

ನಲ್ಮೆಯ ಬಂಧುಗಳೇ….
ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಅಂತರ್ಜಾಲ ಪತ್ರಿಕೆಗೀಗ ಮೊದಲ ಹುಟ್ಟು ಹಬ್ಬದ ಸಂಭ್ರಮ.ಈ ಸಂಭ್ರಮವನ್ನು ನಿಮ್ಮೆಲ್ಲರೊಂದಿಗೆ ಕೂಡಿ ಆಚರಿಸುವ ಉದ್ದೇಶದಿಂದ “ಭಂಡಾರಿವಾರ್ತೆ ಸೆಲ್ಫಿ ಸ್ಪರ್ಧೆ” ಏರ್ಪಡಿಸಲಾಗಿತ್ತು.ಭಂಡಾರಿ ಬಂಧುಗಳಿಂದ ಅಭೂತಪೂರ್ವ ಸ್ಪಂದನೆ ದೊರೆತು ನೂರೈವತ್ತಕ್ಕೂ ಹೆಚ್ಚು ಸ್ಪರ್ಧಿಗಳು ಸ್ಪರ್ಧೆಗೆ ಹೆಸರು ನೊಂದಾಯಿಸಿಕೊಂಡಿದ್ದರು.ಅವುಗಳಲ್ಲಿ ನಮ್ಮ ನಿಯಮಗಳಿಗೆ ಬದ್ಧವಾಗಿ ಕಳುಹಿಸಲ್ಪಟ್ಟ 106 ಸ್ಪರ್ಧಿಗಳನ್ನು ಮಾತ್ರ ಸ್ಪರ್ಧೆಗೆ ಪರಿಗಣಿಸಿ,ನಿಯಮದಂತೆ ಫೋಟೋಗಳಿಗೆ ಮತ್ತು ಭಂಡಾರಿವಾರ್ತೆಯ ಪೇಜ್ ಎರಡಕ್ಕೂ ಮಾಡಿರುವ ಲೈಕ್ ಗಳನ್ನು ಮಾತ್ರ ತಾಳೆಹಾಕಿದ ತೀರ್ಪುಗಾರರು ವಿಜೇತರನ್ನು ಆಯ್ಕೆ ಮಾಡಿದ್ದಾರೆ,ಅದರಂತೆ ವಿಜೇತರು….
ಪ್ರಥಮ: ಸುನಂದ ಭಂಡಾರಿ ಉಡುಪಿ.
ದ್ವಿತೀಯ : ನಾಗೇಶ್ ಭಂಡಾರಿ ಕೊಪ್ಪ. ….ಎಂದು ಘೋಷಿಸಿದ್ದಾರೆ.

ಯಾವುದೇ ಒಂದು ಸ್ಪರ್ಧೆ ಯಶಸ್ವಿಯಾಗಬೇಕಾದರೆ ಪ್ರಾಯೋಜಕರ ಪಾತ್ರ ಮಹತ್ವದ್ದಾಗಿರುತ್ತದೆ.ದೇವರ ಅನುಗ್ರಹದಿಂದ ನಮಗೆ ಉದಾರ ಮನಸ್ಸಿನ ಪ್ರಾಯೋಜಕರು ದೊರೆತಿದ್ದಾರೆ….

# ಶ್ರೀ ಲಕ್ಷ್ಮಣ ಕರಾವಳಿಯವರು.
ಕರಾವಳಿ ಇಂಟರ್ನೆಟ್ ಸರ್ವೀಸಸ್‌ ಮತ್ತು ಕೇಬಲ್‌ ಟಿ.ವಿ ನೆಟ್ ವರ್ಕ್ಸ್‌.
ಬೆಂಗಳೂರು – 560 037
ಮೊಬೈಲ್: 9845261260.

# ಶ್ರೀ ಪ್ರವೀಣ್ ಭಂಡಾರಿ ಮತ್ತು ಕುಟುಂಬಸ್ಥರು.
ಕೊಡಕ್ಕಲ್.ಪಡೀಲ್.
ಮಂಗಳೂರು.
ಮೊಬೈಲ್ : 9844177016.

# ಪ್ರಫುಲ್ ಕುಮಾರ್ ಭಂಡಾರಿ.
ಬ್ಲಂಟ್ ಫ್ಯಾಮಿಲಿ ಸಲೂನ್.
ಪ್ಲಾಮಾ ಸೆಂಟರ್ ನೆಲಮಹಡಿ.
ಬಿಜೈ.ಕಾವೂರು ರಸ್ತೆ.
ಮಂಗಳೂರು – 575 003
ಮೊಬೈಲ್: 9663633568.

# ಶ್ರೀ ನರಸಿಂಹ ಭಂಡಾರಿಯವರು.
ಶ್ರೀ ದುರ್ಗಾ ಇಂಜಿನಿಯರಿಂಗ್ ವರ್ಕ್ಸ್.
ಕೃಷಿ ಉಪಕರಣಗಳ ತಯಾರಕರು.
ಚಿಕ್ಕಮಗಳೂರು ಜಿಲ್ಲೆ.
ಕೊಪ್ಪ.
ಮೊಬೈಲ್: 9448530454.

# ಶೃಂಗಾರ್ ಜ್ಯುವೆಲ್ಲರ್ಸ್.
ಮಾರ್ಕೆಟ್ ರಸ್ತೆ.
ಬಂಟ್ವಾಳ.
ಮೊಬೈಲ್: 9886202144.

ನಿಮ್ಮ ಸಹಾಯ ಸಹಕಾರಕ್ಕೆ ನಾವು ಅಭಾರಿಯಾಗಿದ್ದೇವೆ.ಮುಂದೆಯೂ ನಿಮ್ಮಿಂದ ಇದೇ ರೀತಿಯ ಸಹಕಾರವನ್ನು ನಿರೀಕ್ಷಿಸುತ್ತೇವೆ.
ಮತ್ತೊಮ್ಮೆ ಸೆಲ್ಫಿ ಸ್ಪರ್ಧೆಯ ಯಶಸ್ಸಿಗೆ ಶ್ರಮಿಸಿದ ಭಂಡಾರಿ ಬಂಧುಗಳಿಗೆ,ಸ್ಪರ್ಧಿಗಳಿಗೆ,ಪ್ರಾಯೋಜಕರಿಗೆ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸಿದ ಭಂಡಾರಿವಾರ್ತೆ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತಾ…ಭಂಡಾರಿವಾರ್ತೆಯ ಪ್ರಥಮ ವರ್ಷದ ವಾರ್ಷಿಕೋತ್ಸವಕ್ಕೆ ತಮ್ಮನ್ನೆಲ್ಲಾ ಆತ್ಮೀಯವಾಗಿ ಸ್ವಾಗತಿಸುತ್ತೇನೆ.

 

ಧನ್ಯವಾದಗಳೊಂದಿಗೆ….

 

 

 

 

 

ಪ್ರಕಾಶ್ ಭಂಡಾರಿ ಕಟ್ಲಾ.
ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕರು.
ಭಂಡಾರಿವಾರ್ತೆ.

Leave a Reply

Your email address will not be published. Required fields are marked *