ತಾಯಿ ಅಂದಾಗ ನೆನಪಾಗುವುದು ಪ್ರೀತಿ ತುಂಬಿದ ಹೃದಯ.
ಅತ್ತೆ ಮಾವನಿಗೆ ಸೊಸೆಯಾಗಿ, ಗಂಡನಿಗೆ ಹೆಂಡತಿಯಾಗಿ, ಮಕ್ಕಳಿಗೆ ತಾಯಿಯಾಗಿ ಎಲ್ಲರ ಸುಖ-ದುಃಖಗಳಲ್ಲಿ ಭಾಗಿಯಾಗುವ ಜೀವ ಅದುವೇ ತಾಯಿ. ತನ್ನ ಮಕ್ಕಳಿಗೋಸ್ಕರ ಕಷ್ಟಪಟ್ಟು ದುಡಿದು ಮಕ್ಕಳಿಗೆ ಕಷ್ಟ ಬರಬಾರದು ಎಂದು ಚಡಪಡಿಸುವ ತಾಯಿ ನಿಜಕ್ಕೂ ದೇವರಲ್ಲವೇ?..
ನಾವು ಬಿದ್ದಾಗ, ನೋವಾದಾಗ ನಮ್ಮ ಬಾಯಲ್ಲಿ ಬರುವ ಮೊದಲ ಪದವೇ ಅಮ್ಮ ಇದುವೇ ಅಲ್ಲವೇ ತಾಯಿಗೆ ಇರುವ ಶಕ್ತಿ. ಮಕ್ಕಳು ಗೆದ್ದಾಗ ಖುಷಿಪಟ್ಟು ತಪ್ಪು ಮಾಡಿದಾಗ ಬುದ್ಧಿ ಹೇಳಿ ಸರಿದಾರಿಗೆ ತರುವ ತಾಯಿ ನಿಜವಾಗಲೂ ಗ್ರೇಟ್ ಅಲ್ಲವೇ?.
ನಾನು ಎಲ್ಲೋ ಕೇಳಿದ ತಾಯಿಯ ತ್ಯಾಗದ ಒಂದು ಚಿಕ್ಕ ಕಥೆ.
ಮುದುಕಿಯಾದ ತಾಯಿಯನ್ನು ಮಗ ವೃದ್ಧಾಶ್ರಮಕ್ಕೆ ಸೇರಿಸುತ್ತಾನೆ. ತಾಯಿ ಕೆಲವು ವರ್ಷಗಳ ಕಾಲ ಅಲ್ಲೇ ಇರುತ್ತಾರೆ, ನಂತರ ಅವರು ಸಾಯುವ ಸಮಯದಲ್ಲಿ ಮಗ ನೋಡಲು ಬರುತ್ತಾನೆ. ಆಗ ತಾಯಿಗೆ ನಿನ್ನ ಕೊನೆ ಆಸೆ ಏನಮ್ಮ ಎಂದು ಕೇಳಿದಾಗ ತಾಯಿ ಇಲ್ಲಿ ಸೊಳ್ಳೆಗಳ ಕಾಟ ಸರಿಯಾದ ಸೊಳ್ಳೆಪರದೆ ಇಲ್ಲ, ಫ್ಯಾನ್ ಇಲ್ಲ ಇಲ್ಲಿಗೆ ಒಂದು ಫ್ಯಾನ್ ಹಾಕಿಸು ಅಂತ ಕೇಳ್ತಾಳೆ. ಮಗ ಆಶ್ಚರ್ಯಗೊಂಡು ಯಾಕೆ ಅಮ್ಮ ನೀನು ಸಾಯುವ ಸ್ಥಿತಿಯಲ್ಲಿದ್ದು ಇನ್ನು ಯಾಕೆ ಫ್ಯಾನ್ ಅಂತ ಕೇಳ್ತಾರೆ. ಆಗ ತಾಯಿ ಸಂಕಟಪಟ್ಟು ಮಗನಿಗೆ “ನಿನ್ನ ಮಗ ನಿನ್ನನ್ನು ಈ ಆಶ್ರಮಕ್ಕೆ ಸೇರಿಸಿದಾಗ ನಾನು ಪಟ್ಟ ಕಷ್ಟ ನೀನು ಪಡಬಾರದು” ಎಂದಷ್ಟೇ ಮಗನೇ ಎಂದು ಪ್ರಾಣಬಿಟ್ಟಳು.
ಈ ಕಥೆಯಲ್ಲಿ ನಮಗೆ ತಿಳಿಯುವುದು ತಾಯಿಯ ತ್ಯಾಗ ಮತ್ತು ಪ್ರೀತಿ ಅಲ್ವಾ
ನನಗೆ ನನ್ನ ತಾಯಿಯನ್ನು ನೋಡಿದಾಗ ಹೆಮ್ಮೆ ಅನಿಸುತ್ತೆ ಯಾವುದೇ ಕಷ್ಟದ ಸಂದರ್ಭದಲ್ಲಿ ಧೈರ್ಯಗೆಡದೆ ಬಂದದ್ದು ಬರಲಿ ಎದುರಿಸುತ್ತೇನೆ ಎನ್ನುವ ನನ್ನ ತಾಯಿ ನನಗೆ ಮಾದರಿ
ಇಷ್ಟೆಲ್ಲ ತ್ಯಾಗಮಾಡುವ ತಾಯಿ ಕೂಡ ಒಬ್ಬ ದೇವರಲ್ಲವೇ?.
-ಅಶ್ವಿನಿ ಪ್ರವೀಣ್ ಭಂಡಾರಿ ಅಂಜರಾಡಿ, ಜಾರಿಗೆಕಟ್ಟೆ