November 21, 2024
2

ಪಲಾವ್-ಪರೋಟಗೆ ಬೆಸ್ಟ್ ಕಾಂಬಿನೇಷನ್ ಈ ಮೂಲಂಗಿ ಮೊಸರು ಬಜ್ಜಿ

  • 10mTotal Time
  • 10mPrep Time
  • 96Calories

ಬೆಳಗಿನ ತಿಂಡಿಗೆ ರೈಸ್ ಬಾತ್‌ ಮಾಡಿ ಅದಕ್ಕೆ ನಂಚಿಕೊಳ್ಳಲು, ತಟ್ಟೆಯ ಪಕ್ಕದಲ್ಲಿ ಮೊಸರು ಬಜ್ಜಿ ಇಲ್ಲ ಎಂದರೆ, ಅದನ್ನು ಮಾಡಿಯೂ ಕೂಡ ಪ್ರಯೋಜನ ಇಲ್ಲದಂತೆ ಆಗುತ್ತದೆ! ಯಾಕೆಂದರೆ ಯಾವುದೇ ಬಗೆಯ ರೈಸ್ ಬಾತ್‌ ಆದರೂ ಕೂಡ ಸ್ವಲ್ಪ ಮೊಸರು ಬಜ್ಜಿ ಇದ್ದರೆ, ಅದರ ಮಜಾನೇ ಬೇರೆ! ಹೀಗಾಗಿ ಇಲ್ಲೊಂದು ಹೊಸ ವೆರೈಟಿ ಅಂದರೆ ಮೂಲಂಗಿ ಸೇರಿಸಿ ತಯಾರು ಮಾಡುವ ಮೊಸರಿನ ರಾಯತ ಅಥವಾ ಮೊಸರು ಬಜ್ಜಿ ರೆಸಿಪಿ ಬಗ್ಗೆ ತಿಳಿಸಿಕೊಡಲು ಹೊರಟಿದ್ದೇವೆ. ನಾವು ಕೆಳಗೆ ತಿಳಿಸಿರುವ ಹಾಗೆ ಸಾಮಗ್ರಿಗಳನ್ನು ತೆಗೆದುಕೊಂಡು ತಯಾರು ಮಾಡಿದರೆ, ಮತ್ತಷ್ಟು ತಿನ್ನಬೇಕು ಎನಿಸುವಂತಹ ಬಾಯಿರುಚಿ ನಿಮ್ಮದಾಗುತ್ತದೆ. ಹಾಗಿದ್ದ ಮೇಲೆ ಇವತ್ತೇ ಏಕೆ ನೀವು ಇದನ್ನು ಟ್ರೈ ಮಾಡಿ ನೋಡಬಾರದು.

(ಬಡಿಸುವ ಪ್ರಮಾಣ: 2)

ಪ್ರಮುಖ ಸಾಮಗ್ರಿ

  • 3 – ಮೂಲಂಗಿ

ಮುಖ್ಯ ಅಡುಗೆಗೆ

  • 3/4 ಕಪ್‌ ಮೊಸರು
  • ಅಗತ್ಯ ತಕ್ಕಷ್ಟು ಉಪ್ಪು
  • 1 ಮುಷ್ಟಿಯಷ್ಟು ತುಂಬಾ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು
  • 1 – ಹಸಿಮೆಣಸಿನಕಾಯಿ
  • 1/2 ಕಪ್‌ ತೆಂಗಿನಕಾಯಿ
  • 1 ಚಮಚ ಸಾಸಿವೆ
  • 1 ಚಮಚ ಜೀರಿಗೆೆ
  • 1 ಚಮಚ ಉದ್ದಿನ ಬೇಳೆ
  • 1 ಚಮಚ ಕಡಲೆ ಬೇಳೆ

ಒಗ್ಗರಣೆೆ

  • 3 ಚಮಚ ಸಂಸ್ಕರಿಸಿದ ಎಣ್ಣೆ

Step 1:

ಮೊದಲಿಗೆ ನೀವು ತೆಗೆದುಕೊಂಡ ಮೂಲಂಗಿ ತುದಿಗಳನ್ನು ಕತ್ತರಿಸಿ ಹಾಕಿ, ಮೇಲ್ಭಾಗದಲ್ಲಿ ಇರುವಂತಹ ಸಿಪ್ಪೆ ತೆಗೆದುಹಾಕಿ. ಮೂಲಂಗಿಗಳನ್ನು ಚೆನ್ನಾಗಿ ತೊಳೆದು ಸಣ್ಣದಾಗಿ ಹೆಚ್ಚಿ ಒಂದು ಬೌಲ್ ನಲ್ಲಿ ಹಾಕಿ ಇಟ್ಟುಕೊಳ್ಳಿ.

Step 2:

ಮೊಸರಿನೊಂದಿಗೆ ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಕಲಸಿ

Step 3:

ಒಂದು ಪ್ಯಾನ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ, ಉದ್ದಿನಬೇಳೆ, ಕಡಲೇ ಬೇಳೆ, ಜೀರಿಗೆ ಎಲ್ಲವನ್ನು ಒಗ್ಗರಣೆಯಲ್ಲಿ ಸೇರಿಸಿ 2 ರಿಂದ 3 ನಿಮಿಷಗಳ ಕಾಲ ಹಾಗೆ ಬಿಡಿ.

Step 4:

ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಇದರಲ್ಲಿ ಹಾಕಿ, ಹಸಿಮೆಣಸಿನಕಾಯಿ ಸೇರಿಸಿ ಚೆನ್ನಾಗಿ ಹುರಿಯಿರಿ ಮತ್ತು ಎಲ್ಲವನ್ನೂ ಮಿಶ್ರಣ ಮಾಡಿ

Step 5:

ಇದನ್ನು ಒಂದು ಸಲಾಡ್ ತರಹ ನಿಮ್ಮ ಊಟದ ಜೊತೆ ರುಚಿಕರವಾಗಿ ಸವಿಯಬಹುದು.

ಸಂಗ್ರಹ : ಎಸ್.ಬಿ ನೆಲ್ಯಾಡಿ

ಮೂಲ: ವಿ ಕೆ

Leave a Reply

Your email address will not be published. Required fields are marked *