ಗುರುವೆಂಬ ಬೆಳಕು
ವಿದ್ಯಾರ್ಥಿಗಳ ಜೀವನಕ್ಕೆ ಮುನ್ನುಡಿ ಬರೆದು
ಬದುಕಿನ ಸಾರವ ತಿಳಿಸಿ ಸರಿದಾರಿಯ ತೋರಿಸಿ
ತಪ್ಪನ್ನು ತಿದ್ದಿ ಸನ್ಮಾರ್ಗದಿ ನಡೆಸಿ
ಎಡವಿದಾಗ ಕೈಯ ಹಿಡಿದು ಮುನ್ನಡೆಸಿ
ಶಾಲೆಯೆಂಬ ದೇಗುಲದಿ ದೇವರ ರೂಪದಿ ನಿಂತು
ಧೈರ್ಯ, ಭರವಸೆ, ಛಲವನ್ನು ತುಂಬಿ
ಪ್ರೀತಿ, ಕಾಳಜಿಯಿಂದ ಮಕ್ಕಳ ಮನ ಗೆದ್ದು
ನಿಸ್ವಾರ್ಥ ಸೇವೆಯಿಂದ ಜಗವ ಬೆಳಗಿ
ವೃತ್ತಿ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿ
ಮಣ್ಣಿನ ಮುದ್ದೆಯ ತಿದ್ದಿ ತೀಡಿ
ಸುಂದರ ರೂಪವ ನೀಡೊ ಶಿಲ್ಪಿಗಳಾಗಿ
ಗುರುವಾಗಿ,ಗೆಳೆಯನಾಗಿ, ಪೋಷಕನಾಗಿ
ಶಿಷ್ಯನ ಜೀವನ ರೂಪಿಸೊ
ಜಗದ ಶ್ರೇಷ್ಠ ಸ್ಥಾನವನ್ನು ಪಡೆದು
ವಿದ್ಯಾರ್ಥಿಗಳ ಬದುಕಿನ ಪರಿಪೂರ್ಣತೆಯೊಂದಿಗೆ ತನ್ನ ವೃತ್ತಿಯನ್ನು ಸಾರ್ಥಕಗೊಳಿಸೊ
ಎಲ್ಲ ಶಿಕ್ಷಕರಿಗೂ.. ಶಿಕ್ಷಕರ ದಿನಾಚರಣೆಯ ಶುಭಾಶಯಗಳು
–
ವೈಶಾಲಿ ಭಂಡಾರಿ